ಮಣಿಪಾಲ: ಜನರನ್ನು ಸೂಜಿಗಲ್ಲಿನಂತೆ ಸೆಳೆದ ತೆರಪಿಸ್ಟ್ ತನುಜಾ ಮಾಬೆನ್ ಅವರ  "ರೀ ಡಿಸೈನ್ ಯುವರ್ ಮೈಂಡ್ " ಕಾರ್ಯಾಗಾರ

ಮಣಿಪಾಲ: ಜನರನ್ನು ಸೂಜಿಗಲ್ಲಿನಂತೆ ಸೆಳೆದ ತೆರಪಿಸ್ಟ್ ತನುಜಾ ಮಾಬೆನ್ ಅವರ "ರೀ ಡಿಸೈನ್ ಯುವರ್ ಮೈಂಡ್ " ಕಾರ್ಯಾಗಾರ

 

ಮಣಿಪಾಲ: 'ರೀ ಡಿಸೈನ್ ಯುವರ್ ಮೈಂಡ್' ಎಂಬ ಮೂರು ಗಂಟೆಗಳ  ಕಾರ್ಯಾಗಾರ ಮಣಿಪಾಲದ ಜನತೆಯನ್ನು ಮಂತ್ರಮುಗ್ಧರನ್ನಾಗಿಸಿತು.ಮಣಿಪಾಲದ ಟೀ ಟ್ರೀ ಸೂಟ್ಸ್ ಹೊಟೇಲಿನಲ್ಲಿ ಈ ಕಾರ್ಯಾಗಾರವನ್ನು ಖ್ಯಾತ ಥೆರಪಿಸ್ಟ್  ಮತ್ತು ಟ್ರೈನರ್  ತನುಜಾ ಮಾಬೆನ್ ಆಯೋಜಿಸಿದ್ದರು.

ಮೂರು ಗಂಟೆಗಳ ಈ ಕಾರ್ಯಾಗಾರ ನೆರೆದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ನಮ್ಮ ಬಹುತೇಕ ಯೋಚನೆಗಳು , ಹವ್ಯಾಸಗಳು ಮತ್ತು ಭಾವನೆಗಳು ಬಾಲ್ಯದಲ್ಲೇ ರೂಪುಗೊಂಡಿರುತ್ತವೆ ಎಂಬುದರ ಬಗ್ಗೆ ಕಾರ್ಯಾಗಾರ ಬೆಳಕು ಚೆಲ್ಲಿತು. ಹೀಗೆ ಬಾಲ್ಯದಲ್ಲಿ ನಮ್ಮ ಮೇಲಾದ ಪ್ರಭಾವ ,ನಾವು ದೊಡ್ಡವರಾದ ಮೇಲೂ ಮುಂದುವರೆಯುತ್ತದೆ.

ತನುಜಾ ಮಾಬೆನ್ ಅವರು ಮಾತನಾಡುತ್ತಾ ,ಬಾಲ್ಯದಲ್ಲಿ ನಮ್ಮ ಮೇಲಾಗುವ ಬಗೆಬಗೆಯ ಪರಿಣಾಮಗಳು ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತದೆ.ಹೀಗಾಗಿ ಒಬ್ಬ ವ್ಯಕ್ತ ಯಾವ ರೀತಿ ರೂಪುಗೊಳ್ಳುತ್ತಾನೆ ಎಂಬುದು ಅವನ  ಬಾಲ್ಯ ಹೇಗಿತ್ತು ಎಂಬುದರ ಮೇಲೆ  ಅವಲಂಬಿಸಿದೆ ಎಂದರು.

ನಕಾರಾತ್ಮಕ ಯೋಚನೆಗಳಿಂದ ಹೊರಬಂದಾಗ ಬದುಕು ಸುಂದರವಾಗಿ ಕಾಣುತ್ತದೆ ಎಂದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಹಲವು ಜನ ತಮ್ಮ ಬದುಕು ,ಯೋಚನೆ , ಯೋಜನೆಗಳ ಬಗ್ಗೆ ಮಾಬೆನ್ ಜೊತೆ ಸಮಾಲೋಚನೆ ನಡೆಸಿ ಖುಷಿಪಟ್ಟರು.

Ads on article

Advertise in articles 1

advertising articles 2

Advertise under the article