
ಕುಂದಾಪುರ: ಎಂಜಿಎಂ ಬಳಿ ಅಪಘಾತಕ್ಕೀಡಾಗಿದ್ದ ಆ್ಯಂಬುಲೆನ್ಸ್ ಚಾಲಕ ಆತ್ಮಹತ್ಯೆ !
28/07/2025 09:15 AM
ಕುಂದಾಪುರ: ಸ್ವಂತ ಆ್ಯಂಬುಲೆನ್ಸ್ ಇಟ್ಟುಕೊಂಡಿದ್ದ ಕೋಟೇಶ್ವರದ ಕೆ.ಎಸ್. ಅಯೂಬ್ (56) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇವರು ತಿಂಗಳ ಹಿಂದೆಯಷ್ಟೇ ಆ್ಯಂಬು ಲೆನ್ಸ್ ಖರೀದಿಸಿದ್ದು, ಇತ್ತೀಚೆಗೆ ಮಣಿಪಾಲ ಹತ್ತಿರ ಅಪಘಾತ ಉಂಟಾಗಿ, ಆ್ಯಂಬುಲೆನ್ಸ್ ಜಖಂಗೊಂಡು ದುರಸ್ತಿಗೆ ಹಣ ಹೊಂದಿಸಿಕೊಳ್ಳಲಾಗದೆ ಚಿಂತೆಯಲ್ಲಿದ್ದರು.
ಇವರು ನಿದ್ರಾಹೀನತೆಗೆ ನಿದ್ರೆ ಮಾತ್ರೆ ತೆಗೆದುಕೊಳ್ಳುತ್ತಿದ್ದು, ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.