
ಮುಂಬಯಿ: ಮಹಾರಾಷ್ಟ್ರ'ಲಡ್ಕಿ ಬಹಿನ್ ಯೋಜನೆ'ಯಲ್ಲಿ ಕೋಟ್ಯಂತರ ರೂ. ಗೋಲ್ ಮಾಲ್
28/07/2025 05:27 AM
ಮುಂಬಯಿ: ಮಹಾರಾಷ್ಟ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ಜಾರಿಗೆ ತಂದಿರುವ 'ಲಡ್ಕಿ ಬಹಿನ್ ಯೋಜನೆ' ಯಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಈ ಯೋಜನೆಯಡಿ 14,298 ಪುರುಷರು ಅಕ್ರಮವಾಗಿ 21.44 ಕೋಟಿ ರೂ. ಪಡೆದಿರುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲೆಕ್ಕಪರಿಶೋಧನೆಯಲ್ಲಿ ಬಯಲಾಗಿದೆ.
ಯೋಜನೆಯ ಆನ್‌ಲೈನ್ ನೋಂ ದಣಿ ವ್ಯವಸ್ಥೆ ದುರುಪಯೋಗಪಡಿಸಿ ಪುರುಷರು ಮಹಿಳಾ ಫಲಾನುಭವಿಗ ಳೆಂದು 'ನೋಂದಾಯಿಸಿಕೊಂಡಿರು ವುದು ಗೊತ್ತಾಗಿದೆ. 21-65 ವರ್ಷದ ಮಹಿಳೆಯರಿಗೆ ಮಾಸಿಕ 1,500 ರೂ. ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಅಜಿತ್ ಪವಾರ್, ಅಕ್ರಮ ಮಾಡಿರುವ ಪುರುಷರಿಂದ ಹಣ ವಸೂಲಿ ಮಾಡುವುದಾಗಿ ತಿಳಿಸಿದ್ದಾರೆ.
ಪುರುಷರು ಹೇಗೆ ಅರ್ಜಿ ಸಲ್ಲಿಸಿದರು, ನೋಂದಣಿಗಾಗಿ ಯಾವ ಕಂಪೆನಿಗೆ ಗುತ್ತಿಗೆ ನೀಡಲಾ ಗಿತ್ತು? ಇದರ ಹಿಂದೆ ದೊಡ್ಡ ಪಿತೂರಿ ಇದೆ. ಕಂಪೆನಿಯ ಬಗ್ಗೆ ಎಸ್‌ಐಟಿ ಅಥವಾ ಇ.ಡಿ. ಮೂಲಕ ತನಿಖೆ ಮಾಡಬೇಕು' ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಒತ್ತಾಯಿಸಿದ್ದಾರೆ.