
ಉಡುಪಿ: ವಾಟ್ಸಾಪ್ ಸಂದೇಶ ನಂಬಿ 11 ಲಕ್ಷ ರೂ. ಕಳೆದುಕೊಂಡ ಮಹಿಳೆ !
19/07/2025 07:07 AM
ಉಡುಪಿ: ವಾಟ್ಸಾಪ್ ನಲ್ಲಿ ಬಂದ ಅಧಿಕ ಲಾಭಾಂಶದ ಸಂದೇಶದ ಆಮಿಷಕ್ಕೆ ಒಳಗಾದ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.
ಉಡುಪಿಯ ಸುಹಾಸಿನಿ ವಂಚನೆಗೆ ಒಳಗಾದ ಮಹಿಳೆ. ಅವರ ವಾಟ್ಸ್ ಆ್ಯಪ್ ಸಂಖ್ಯೆಗೆ ಯಾರೋ ಅಪರಿಚಿತರು ಸಂದೇಶ ಕಳುಹಿಸಿದ್ದು, ಅನಂತರದಲ್ಲಿ ಎ432 ಗೇಟ್ ಗ್ರೂಪ್ ಎಂಬ ಟೆಲಿಗ್ರಾಂ ಗ್ರೂಪ್‌ಗೆ ಸೇರುವಂತೆ ಲಿಂಕ್ ಕಳುಹಿಸಿಕೊಟ್ಟಿದ್ದರು. ಅದನ್ನು ನಂಬಿದ ಸುಹಾಸಿನಿ ಅವರು 11,61,256 ರೂ. ಹೂಡಿಕೆ ಮಾಡಿದ್ದು, ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ನೀಡದೆ ಆರೋಪಿಗಳು ವಂಚಿಸಿದ್ದಾರೆ. ಸೆನ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.