ಪೆರ್ಡೂರು ಸ್ವರ್ಣ ಗ್ರೀನ್‌ ವ್ಯಾಲಿ ರೆಸಾರ್ಟ್‌ ನಲ್ಲಿ ಅಂದರ್ ಬಾಹರ್‌ ಜುಗಾರಿ ಆಟ - 26 ಜನರ ಬಂಧನ




ಉಡುಪಿ: ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್‌ ವ್ಯಾಲಿ ರೆಸಾರ್ಟ್‌ ನಲ್ಲಿ ಅಂದರ್-ಬಾಹರ್‌ ಜುಗಾರಿ ಆಟ ನಡೆದಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಈ ವೇಳೆ ಜೂಜಾಟದಲ್ಲಿ ಭಾಗಿಯಾದ 26 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸತೀಶ(49) ,ಉಳಿಯಾರುಗೋಳಿ ಕಾಪು, ಅಕ್ಷಯ(31) ಮೂಡಬಿದ್ರೆ, ದಿನೇಶ ಕಾಪು,  ಮಾಧವ ಪೂಜಾರಿ ಬೆಳಪು , ಪ್ರಶಾಂತ ಕಾಪು , ಅಕ್ಷಯ ಕಾಪು ,ದಿನೇಶ ಕಾಪು ,ಭರತ್‌ ಕಾಪು , ಸಂತೋಷ ಕಣಜಾರು ,ಅರುಣ ಕಾಪು , ರೋಶನ್‌ ಕಾಪು , ಚರನ್‌ ಕಾಪು ,ಲೋಹಿತ್‌ ಮೂಡಬಿದ್ರೆ , ಶಿವ ಉಚ್ಚಿಲ , ಮನಿಷ ಕಾಪು ,ರಂಜಿತ್‌ ಕಾಪು ,ಯಾದವ್‌ ಕಾಪು , ಪೃಥ್ವಿನ್‌ ಕಾಪು ,ಶಿವ ಕಾಪು , ದೀಪಕ್‌ ಕಾಪು ,ವಿತೇಶ ಕಾಪು ,ಅಬ್ದುಲ್‌ ಹಮೀದ್‌ ಶಿರ್ವ , ಹರೋನ್‌ ಶಿರ್ವ ,ಕೃಷ್ಣ ಕಾಪು ,ಅಶೋಕ ಉಡುಪಿ , ಮತ್ತು ಶೈಲೇಶ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1,31,630/- ರೂಪಾಯಿ , ದ್ವಿಚಕ್ರ ಮತ್ತು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಪೆರ್ಡೂರು ಗ್ರಾಮದ ಪುತ್ತಿಗೆ ಸ್ವರ್ಣ ಗ್ರೀನ್‌ ವ್ಯಾಲಿ ರೆಸಾರ್ಟ್‌ ನ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.