
ಕೊಲ್ಲೂರು:ವಿಜಯದಶಮಿ ಸಂದರ್ಭ ಕೊಲ್ಲೂರು ಮೂಕಾಂಬಿಕೆ ದರ್ಶನ ಮಾಡಿದ ಬಿಜೆಪಿ ಮುಖಂಡ ಅಣ್ಣಾಮಲೈ
02/10/2025 10:59 AM
ಕೊಲ್ಲೂರು:ದಸರಾ ಸಂದರ್ಭದಲ್ಲಿ ಮಾಜಿ ಪೊಲೀಸ್ ಅಧಿಕಾರಿ, ಬಿಜೆಪಿ ಮುಖಂಡ ಅಣ್ಣಾಮಲೈ ಅವರು ಮೂಕಾಂಬಿಕೆಯ ದರ್ಶನ ಮಾಡಿದರು. ವಿಜಯದಶಮಿಯ ಸಲುವಾಗಿ ಮುಕಾಂಬಿಕೆಯ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಿ ದರ್ಶನಕ್ಕಾಗಿ ಇಂದು ಮುಂಜಾನೆಯೇ ದೇವಾಲಯಕ್ಕೆ ಅವರು ಆಗಮಿಸಿದ್ದರು.ಈ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅಣ್ಣಾಮೈಗೆ ವಿಶೇಷ ಗೌರವ ಅರ್ಪಣೆ ಮಾಡಲಾಯಿತು.
ಅಣ್ಣಾಮಲೈ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು , ಭಕ್ತರು ಮುಗಿಬಿದ್ದರು.ಕೆಲಹೊತ್ತು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಬಳಿಕ ಅಲ್ಲಿಂದ ತೆರಳಿದರು.ಈ ಹಿಂದೆ ಉಡುಪಿಯಲ್ಲಿ ಎಸ್ಪಿ ಆಗಿಯೂ ಅಣ್ಣಾ ಮಲೈ ಕಾರ್ಯ ನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.