ಕಾರ್ಕಳ: ಕೊಲೆಯತ್ನ ಆರೋಪಿ ಬಲರಾಮ ಹೆಗ್ಡೆಗೆ ಜೈಲು ಶಿಕ್ಷೆ

ಕಾರ್ಕಳ: ಕೊಲೆಯತ್ನ ಆರೋಪಿ ಬಲರಾಮ ಹೆಗ್ಡೆಗೆ ಜೈಲು ಶಿಕ್ಷೆ

 


ಕಾರ್ಕಳ: ಮಹಿಳೆಯೋರ್ವರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ ನಡೆಸಿದ್ದ ಪ್ರಕರಣದಲ್ಲಿ ಆರೋಪಿಯನ್ನು ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ಸಂಚಾರಿ ಪೀಠ ( ಕಾರ್ಕಳ) ನ್ಯಾಯಧೀಶ ಸಮೀವುಲ್ಲಾ ದೋಷಿ ಎಂದು ಮಂಗಳವಾರ ಆದೇಶಿಸಿದ್ದಾರೆ. 

ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಬಲರಾಮ ಹೆಗ್ಡೆ ಎಂದು ಗುರುತಿಸಲಾಗಿದೆ. 

ಪ್ರಕರಣ ಹಿನ್ನಲೆ: 

2022 ರ ಮಾ.14 ರಂದು ಹೆಬ್ರಿ ಠಾಣಾ ವ್ಯಾಪ್ತಿಯ ಮುದ್ರಾಡಿ ಗ್ರಾಮದ ಬಲ್ಲಾಡಿಯ ಗೇರುಬೀಜ ಕಾರ್ಖಾನೆಯಿಂದ ಮಧ್ಯಾಹ್ನ ಮನೆಗೆ ವಾಪಾಸಾಗುತ್ತಿದ್ದ ಪ್ರಮೋದಾ ಕುಲಾಲ್ ಎಂಬವರನ್ನು ಬಲ್ಲಾಡಿ 5 ಸೆಂಟ್ಸ್ ಈಶ್ವರ ನಗರ ಎಂಬಲ್ಲಿ ಆರೋಪಿ ಬಲರಾಮ ಹೆಗ್ಡೆ ಅಡ್ಡಗಟ್ಟಿ, ಅವ್ಯಾಚ ಶಬ್ದಗಳಿಂದ ನಿಂದಿಸಿ, ಕತ್ತಿಯಿಂದ ಕಡಿದು ಕೊಲೆಗೈಯಲು ಯತ್ನಿಸಿದರು. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಕೊಲೆಯತ್ನ, ಮಹಿಳೆಗೆ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ಕಲಂನಂತೆ ಪ್ರಕರಣ ದಾಖಲಾಗಿತ್ತು. 

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಆದೇಶಿಸಿದ್ದು, ಆರೋಪಿ ಬಲರಾಮ ಹೆಗ್ಡೆಯನ್ನು ಬಂಧಿಸಿ, ಹಿರಿಯಡ್ಕದ ಕಾರಗೃಹಕ್ಕೆ ಕಳುಹಿಸಲಾಗಿದೆ. 

ಮಂಗಳವಾರ (ಸೆ.30) ರಂದು ಶಿಕ್ಷೆಯ ಪ್ರಮಾಣದ ಬಗ್ಗೆ ಸರಕಾರಿ ಅಭಿಯೋಜಕರು ಹಾಗು ಆರೋಪಿ ಪರ ವಕೀಲರ ವಾದ - ಪ್ರತಿವಾದವನ್ನು ನ್ಯಾಯಾಲಯವು ಆಲಿಸಿದ್ದು, ಅ.6 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ದಿನಾಂಕ ನಿಗದಿಗೊಳಿಸಿದೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

Ads on article

Advertise in articles 1

advertising articles 2

Advertise under the article