
ಉಡುಪಿ: ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳಿಂದ"ಆಸರೆ" ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಭೇಟಿ
29/09/2025 04:05 PM
ಉಡುಪಿ: ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಮಣಿಪಾಲದ "ಆಸರೆ" ವಿಶೇಷ ಚೇತನರ ಕಾಳಜಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿದರು.
ಕೇಂದ್ರದಲ್ಲಿರುವ ವಿಶೇಷ ಚೇತನರ ಜೊತೆಗೆ ಸಮಯವನ್ನು ಕಳೆದು, ಅವರೊಂದಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿದರು.
ಈ ವೇಳೆ ಅರ್ಚನಾ ಟ್ರಸ್ಟಿನ ಅಧ್ಯಕ್ಷ ಜೈ ವಿಠ್ಠಲ್, ಹಿರಿಯ ವಿಶೇಷ ತರಬೇತುದಾರ ರಮೇಶ್ ನಾಯ್ಕ್, ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ.ನವೀನ್ಚಂದ್ರ, ಅಮೋಘ್, ಜಯಮೋಲ್, ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀವತ್ಸ.ಡಿ.ಗಾಂವ್ಸ್‌ಕರ್, ಶಮಂತ್, ಎನ್‌ಎಸ್‌ಎಸ್ ಕಾರ್ಯದರ್ಶಿ ಅಂಕಿತಾ, ಸಂದೇಶ್, ಸಮೀರ್ ಉಪಸ್ಥಿತರಿದ್ದರು.