ಉಡುಪಿ:ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಣಕ್ಕಾಗಿ ಕಮಿಟಿ ರಚನೆ- ಜಿಲ್ಲಾ ಪೊಲೀಸರಿಂದ ನೂತನ ಕ್ರಮ

ಉಡುಪಿ:ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಣಕ್ಕಾಗಿ ಕಮಿಟಿ ರಚನೆ- ಜಿಲ್ಲಾ ಪೊಲೀಸರಿಂದ ನೂತನ ಕ್ರಮ

 


ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ “ನಶೆಯಿಂದ ಉಷೆಯೆಡೆಗೆ, ನಶೆಮುಕ್ತ ಭಾರತದತ್ತ ನಮ್ಮ ಚಿತ್ತ”ಎಂಬ ಧ್ಯೇಯ ವಾಕ್ಯದೊಂದಿಗೆ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಣಕ್ಕಾಗಿ ರಚಿಸಲಾದ ಕಮಿಟಿಯು ಉಡುಪಿ ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಈಗಾಗಲೇ ಪ್ರಾರಂಭಗೊಂಡಿದೆ. 

ಕಾಲೇಜಿನ ಮುಖ್ಯಸ್ಥರು ಹಾಗೂ ಪೊಲೀಸ್ ಇಲಾಖೆಯು ಸಂಪರ್ಕದಲ್ಲಿದಾಗ ವಿದ್ಯಾರ್ಥಿಗಳು ಮಾದಕ ವಸ್ತುವಿನ ಬಲೆಗೆ ಬೀಳಲು ಹಿಂಜರಿಯಬಹುದು. ಆದ್ದರಿಂದ ಪ್ರತಿಯೊಂದು ಕಾಲೆಜುಗಳಲ್ಲಿ "ANTI DRUG AND AWARENESS COMMITTEE (ADAC)"ಯನ್ನು ಪ್ರಾರಂಭಿಸಲಾಗಿದೆ. ಈ ಕಮಿಟಿಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಇಬ್ಬರು ಸ್ಟಾಫ್ ಹಾಗೂ ಪ್ರತಿ ತರಗತಿಯಿಂದ ಒರ್ವ ವಿದ್ಯಾರ್ಥಿಗಳಿರಬೇಕು. ಅದರಲ್ಲಿ ಕನಿಷ್ಟ ಇಬ್ಬರು ವಿದ್ಯಾರ್ಥಿನಿಯರನ್ನು ಹೊಂದಿರಬೇಕು. ಈ ಕಮಿಟಿಗೆ ಸರಹದ್ದಿನ ಠಾಣಾಧಿಕಾರಿ ಅಂದರೆ ಪೊಲೀಸ್ ನಿರೀಕ್ಷಕರು ಅಥವಾ ಪೊಲೀಸ್ ಉಪನಿರೀಕ್ಷಕರು,(ಕಾನೂನು ಮತ್ತು ಸುವ್ಯವಸ್ಥೆ) ರವರು ನೋಡಲ್ ಅಧಿಕಾರಿಯಾಗಿರುತ್ತಾರೆ. ಪ್ರತೀ ತಿಂಗಳು ಕಮಿಟಿ ಮೀಟಿಂಗ್ ಹಾಗೂ ಒಂದಾದರೂ ಜಾಗೃತಿ ಕಾರ್ಯಕ್ರಮ, ವಾಕಥಾನ್ ಮುಂತಾದ ಸರಳ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ. ಈ ಮಿಟಿಂಗ್‌ಗೆ ಸರಹದ್ದಿನ ಠಾಣೆಯಿಂದ ಯಾರನ್ನಾದರೂ ಕರೆಯಬೇಕು ಹಾಗೂ ಪ್ರತೀ 3 ತಿಂಗಳಿಗೊಮ್ಮೆ ನೋಡಲ್ ಅಧಿಕಾರಿಯನ್ನು ಮೀಟಿಂಗ್‌ಗೆ ಕರೆಯಿಸುವಂತೆ ಸೂಚಿಸಲಾಗಿದೆ. 

ಪ್ರತೀ ಕಾಲೇಜಿನಲ್ಲಿ ತ್ರೈಮಾಸಿಕವಾಗಿ 10% ವಿದ್ಯಾರ್ಥಿಗಳನ್ನು  ವೈದ್ಯಕೀಯ ತಪಾಸಣೆಗೆ  ಒಳಪಡಿಸುವುದು. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಬಗ್ಗೆ ಪಾಸಿಟಿವ್ ಬಂದಲ್ಲಿ ಮಾಹಿತಿಯನ್ನು ನೋಡಲ್ ಅಧಿಕಾರಿಯವರಿಗೆ ನೀಡಲಾಗುತ್ತದೆ. ಯಾವುದೇ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ ಅಂಶ ಕಂಡುಬಂದಲ್ಲಿ ಅವರವರ ಮಾಹಿತಿಯನ್ನು ಗೌಪ್ಯವಾಗಿರಿಸಿ ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಮನಪರಿವರ್ತನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮಾದಕ ವಸ್ತು ನಿಯಂತ್ರಣಕ್ಕಾಗಿ ರಚಿಸಲಾದ ಕಮಿಟಿಯು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಿದೆ.

Ads on article

Advertise in articles 1

advertising articles 2

Advertise under the article