
ಉಡುಪಿ: ಪರಶುರಾಮನ ಹೆಸರಿನಲ್ಲಿ ಜನತೆಗೆ ಮೋಸ ಮಾಡಿದ ಸುನಿಲ್ ಕುಮಾರ್ ಹಿಂದೂ ಧರ್ಮ ಪ್ರೇಮದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ - ಎಸ್ಡಿಪಿಐ
ಉಡುಪಿ: ಸುನಿಲ್ ಕುಮಾರ್ ರವರೇ ಎಸ್ ಡಿ ಪಿ ಐ ಹಾಗೂ ಧರ್ಮಸ್ಥಳ ಹೋರಾಟಗಾರರಿಗೂ ಇರುವ ಸಂಬಂಧ ಮಾನವೀಯತೆ ಸಂಬಂಧ ಹಾಗೂ ನ್ಯಾಯದ ಪರವಾಗಿರುವ ಹೋರಾಟದ ಸಂಬಂಧ. ಎಸ್ ಡಿ ಪಿ ಐ ಯಾರಿಗೆ ಅನ್ಯಾಯವಾದರೂ, ಯಾರ ವಿರುದ್ಧ ದೌರ್ಜನ್ಯವಾದರೂ ಜಾತಿ ಧರ್ಮ ಬೇಧವಿಲ್ಲದೆ ಹೋರಾಟವನ್ನು ನಡೆಸುತ್ತದೆ, ಹಾಗೂ ಆ ರೀತಿ ಹೋರಾಟ ನಡೆಸುವವರಿಗೆ ಬೆಂಬಲವನ್ನೂ ನೀಡುತ್ತದೆ.
ಆದರೆ ತಮಗೂ ಹಾಗೂ ಧರ್ಮಸ್ಥಳದಲ್ಲಿ ನಡೆದ ಶಂಕಿತ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಆರೋಪಿಗಳನ್ನು ರಕ್ಷಿಸುತ್ತಿರುವವರಿಗೂ ಇರುವ ಸಂಬಂಧವೇನು ಎಂಬುದನ್ನು ನೀವು ಸ್ಪಷ್ಟಪಡಿಸಬೇಕು. ಅದೇ ರೀತಿ ತಮಗೂ ಹಾಗೂ ಹೆಣ್ಣು ಮಕ್ಕಳ ಪೀಡಕ ಉಪನ್ಯಾಸಕನಿಗೆ ಇರುವ ಸಂಬಂಧ ಏನು? ಮತ್ತು ತಮಗೂ ಹಾಗೂ ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಹಿಂದೂ ಯುವತಿಯ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ಇರುವ ಸಂಬಂಧ ಏನು ಎಂದು ಇಡೀ ಜಿಲ್ಲೆಯ ಜನತೆಗೆ ತಿಳಿದಿದೆ.
ಶಾಸಕರಿಗೆ ನಿಜವಾಗಿಯೂ ಹಿಂದೂ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಹಾಗೂ ಹಿಂದೂ ಧರ್ಮದ ಬಗ್ಗೆ ಕಾಳಜಿ ಇದ್ದಿದ್ದರೆ ಧರ್ಮಸ್ಥಳದಲ್ಲಿ ಹಲವಾರು ಹಿಂದೂ ಯುವತಿಯರ ಅತ್ಯಾಚಾರ ಹಾಗೂ ಕೊಲೆಯನ್ನು ನಡೆಸಿ ಧರ್ಮಸ್ಥಳದ ಹೆಸರಿಗೆ ಕಳಂಕವನ್ನು ತಂದ ಅತ್ಯಾಚಾರಿಗಳ ವಿರುದ್ಧ ಹೋರಾಟವನ್ನು ನಡೆಸುತ್ತಿದ್ದಿರಿ. ಅಲ್ಲದೆ ಪರಶುರಾಮನ ಹೆಸರಿನಲ್ಲಿ ಕ್ಷೇತ್ರದ ಜನತೆಗೆ ಮೋಸ ಮಾಡಿದ ತಾವು ಹಿಂದೂ ಧರ್ಮ ಪ್ರೇಮದ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.
ಆದ್ದರಿಂದ ತಾವು ಇನ್ನಾದರೂ ಈ ರೀತಿಯ ಬಾಲಿಶ ಹೇಳಿಕೆಗಳನ್ನು ನೀಡಿ ಧರ್ಮ ರಾಜಕಾರಣವನ್ನು ನಡೆಸುವುದು ಬಿಟ್ಟು ತಮ್ಮ ಕ್ಷೇತ್ರದ ಅಭಿವೃದ್ಧಿಯ ಕಡೆ ಗಮನ ಹರಿಸಿ ಎಂದು ಎಸ್ ಡಿ ಪಿ ಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.