
ಉಡುಪಿ: ತತ್ವ ಪ್ರದೀಪ ಧ್ಯಾನ ಮಂದಿರ ಉದ್ಘಾಟನೆ
ಉಡುಪಿ:ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರ ತೊಂಭತ್ತನೇ ಜನ್ಮವರ್ಧಂತಿ ಸದವಸರದಲ್ಲಿ ಅಂಬಲಪಾಡಿಯಲ್ಲಿರುವ ಅವರ ಸ್ವಗೃಹ ಈಶಾವಾಸ್ಯಂ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ "ತತ್ವಪ್ರದೀಪ " ಧ್ಯಾನ ಮಂದಿರದ ಉದ್ಘಾಟನೆ ನೆರವೇರಿತು. ಶ್ರೀ ಕ್ಷೇತ್ರ ಅಂಬಲಪಾಡಿಯ ಆಡಳಿತ ಧರ್ಮದರ್ಶಿ ಡಾ ನಿ ಬೀ ವಿಜಯ ಬಲ್ಲಾಳರು ದೀಪಬೆಳಗಿಸಿ ಉದ್ಘಾಟಿಸಿ ಡಾ ಬನ್ನಂಜೆ ಆಚಾರ್ಯರನ್ನು ಸ್ಮರಣೆಗೈದರು. ವಿದ್ವಾನ್ ಕೃಷ್ಣರಾಜ ಆಚಾರ್ಯ ಕುತ್ಪಾಡಿಯವರು ಧಾರ್ಮಿಕ ಉಪನ್ಯಾಸ ಮಂಡಿಸಿದರು. ನೂತನ ಧ್ಯಾನಮಂದಿರದಲ್ಲಿ ಉಡುಪಿ ಶ್ರೀಕೃಷ್ಣ , ಶ್ರೀ ವೇದವ್ಯಾಸ , ಶ್ರೀ ಮಧ್ವಾಚಾರ್ಯರು ಹಾಗೂ ಗೋವಿಂದಾಚಾರ್ಯರ ಪ್ರತಿಮೆ ಸ್ಥಾಪಿಸಲಾಗಿದೆ.ವಿದ್ವಾನ್ ಹೆರ್ಗ ರವೀಂದ್ರ ಭಟ್ ಇಂಜಿನಿಯರ್ ರಮೇಶ್ ರಾವ್ ಬೀಡು , ಕೆ ಪ್ರಸಾದ್ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು. ವಿನಯಭೂಷಣ ಆಚಾರ್ಯರು ಸ್ವಾಗತ/ ಪ್ರಸ್ತಾವನೆಗೈದರು .ಶ್ರೀಮತಿ ವಾರಿಜಾಕ್ಷಿ ಆರ್ ಭಟ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು .ಅಭಿರಾಮ ತಂತ್ರಿ ವಂದನಾರ್ಪಣೆಗೈದರು.