
ನೇಜಾರ್ ಆಲ್ ಫುರ್ಕಾನ್ ವಿಶೇಷ ಚೇತನ ಮಕ್ಕಳ ಪ್ರೇರಣ ಕಾರ್ಯಕ್ರಮ
18/08/2025 10:50 AM
ನೇಜಾರು: ಇತ್ತೀಚೆಗೆ ನೇಜಾರ್ ನಲ್ಲಿ ಇರುವ ವಿಶೇಷ ಚೇತನ ಮಕ್ಕಳ ಪ್ರೇರಣ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಸಬಿಹಾ ಫಾತಿಮಾ ಮಂಗಳೂರು ಇವರು ಸಭಿಕರನ್ನುದೇಶಿಸಿ ಮಾತನಾಡುತ್ತಾ "ಇಂತಹ ವಿಶೇಷ ಚೇತನ ಮಕ್ಕಳ ಆರೈಕೆ ಹಾಗೂ ಅವರ ಜೀವನ ರೂಪಿಸುವಲ್ಲಿ ಪೋಷಕರ ಜವಾಬ್ದಾರಿ ಪ್ರಮುಖವಾಗಿದೆ" ಎಂದು ಹೇಳಿದರು.
ವೇದಿಕೆಯಲ್ಲಿ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆ ತೋನ್ಸೆ ಇದರ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ, ಸಹ ಶಿಕ್ಷಕಿ ಶ್ರೀಮತಿ ಲವೀನಾ ಕ್ಲಾರಾ ಉಪಸ್ತಿತರಿದ್ದರು.ಶಾಲಾ ಸ್ಥಾಪಕಿ ಹಾಗೂ ಪ್ರಾಂಶುಪಾಲೆ ದಿಲ್ದಾರ ಫಜಲು ರೆಹಮಾನ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ರೇಷ್ಮಾ ಸ್ವಾಗತಿಸಿದರು. ಶಿಕ್ಷಕಿ ಅಸ್ಮಾ ಧನ್ಯವಾದ ಹೇಳಿದರು. ಶಿಕ್ಷಕಿ ಫರಿಹಾ ಕಾರ್ಯಕ್ರಮ ನಿರ್ವಹಿಸಿದರು.