ಉಡುಪಿ ನಗರ ಬಿಜೆಪಿ ಕಮಲ ಕಲರವ  ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ

ಉಡುಪಿ ನಗರ ಬಿಜೆಪಿ ಕಮಲ ಕಲರವ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ

 

ಉಡುಪಿ: ನಗರ ಬಿಜೆಪಿ ವತಿಯಿಂದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಕಮಲ ಕಲರವ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ ತಾಂಗದಗಡಿ ಶ್ಯಾಮ ಕಮಲ ಗದ್ದೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಮಲ ಕಲರವ ಕಾರ್ಯಕ್ರಮವನ್ನು ಶಾಸಕರಾದ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ನಗರ ಭಾಗದ ಯುವ ಜನತೆಗೆ  ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸಿ, ಕೃಷಿ ಕ್ಷೇತ್ರದ ಹಿರಿಯ ಸಾಧಕರು ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರನ್ನು ಗೌರವಿಸುವ ಆಶಯದೊಂದಿಗೆ ಆಯೋಜಿಸಿರುವ ಉಡುಪಿ ನಗರ ಬಿಜೆಪಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ  ಚಂದ್ರಶೇಖರ್ ನಾಯ್ಕ್,  ವಿಠಲ ನಾಯಕ್,  ಗದ್ದೆಯ ಮಾಲೀಕರಾದ ಪ್ರಕಾಶ್ ಶೆಟ್ಟಿ,  ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ಬಿಜೆಪಿ ಹಿರಿಯ  ಕಾರ್ಯಕರ್ತರಾದ ಹಾಡಿಮನೆ ಗೋಪಾಲ ಶೆಟ್ಟಿ, ಕೆ. ಟಿ. ಪೂಜಾರಿ, ಕೇಶವ ಸಾಲ್ಯಾನ್, ಮೋಹನ್ ಉಪಾಧ್ಯಾಯ, ರಘುರಾಮ ಶೆಟ್ಟಿ, ಮಾಧವ ಅಂಚನ್, ದೇವು ಪೂಜಾರಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಮಲ ಕಲರವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು, ಸಾರ್ವಜನಿಕರಿಗೆ ವಿವಿಧ ಕ್ರೀಡೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಉಡುಪಿ ನಗರಸಭಾ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಶ್ರೀ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಮಾಜಿ ಜಿಲ್ಲಾಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ, ಪಕ್ಷದ ಹಿರಿಯ ಮುಖಂಡರು, ನಗರ ಸಭಾ ಸದಸ್ಯರು, ವಿವಿಧ ಮೋರ್ಚಗಳ ಜಿಲ್ಲಾ ಹಾಗೂ ಮಂಡಲದ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article