
ಉಡುಪಿ ಸಿಟಿ ಸೆಂಟರ್ ನಲ್ಲಿ 79ನೇ ಸ್ವಾತಂತ್ರೋತ್ಸವ ಸಮಾರಂಭ
ಉಡುಪಿ: ಉಡುಪಿಯ ಸಿಟಿ ಸೆಂಟರ್ ಮಾಲ್ ಬಿಲ್ಡಿಂಗ್ ನಲ್ಲಿ ಆ. 15ರಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಸಿಟಿ ಸೆಂಟರ್ ಮಾಲ್ ನ ಮ್ಯಾನೇಜರ್ ರಾಧಾಕೃಷ್ಣ ಪೈ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ನಗರಸಭೆ ಸದಸ್ಯ ಟಿ.ಜಿ. ಹೆಗ್ಡೆ, ಉದ್ಯಮಿ ಕೋಡಿ ಇಬ್ರಾಹಿಂ ಮೊಹಮ್ಮದ್, ಭಾರತ್ ಸೈಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ, ಹನೀಫ್, ನಿಶ್ಚಿಂತ್ ದಾಮೋದರ್, ಉಡುಪಿ ಜಾಮೀಯಾ ಮಸೀದಿ ಅಧ್ಯಕ್ಷ ರಿಯಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಅಂದು ಮಧ್ಯಾಹ್ನ 3 ಗಂಟೆಯಿಂದ ಚಿತ್ರಕಲಾ ಸ್ಪರ್ಧೆ, ಮಕ್ಕಳ (ಕಿಡ್ಸ್) ಫ್ಯಾಶನ್ ಶೋ, ರಸಪ್ರಶ್ನೆ (ಕ್ವಿಜ್) ಸ್ಪರ್ಧೆ ನಡೆಯಲಿದೆ. ಬಳಿಕ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಲಿದ್ದು, ಆ ನಂತರ ಸರ್ಟಿಫಿಕೇಟ್ ಮತ್ತು ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮ್ಯಾನೇಜರ್ ಪ್ರದೀಪ್ ಮೂಲ್ಯ, ಯೂನಿಟ್ ಮ್ಯಾನೇಜರ್ ಸೈಯದ್ ಅನೀಸ್ ಉಪಸ್ಥಿತರಿದ್ದರು.