ಪೆರ್ಡೂರು: ಶ್ರಮಿಕ ತರುಣರ ತಂಡ ಸಂಘಟನೆಯಿಂದ ಸಮವಸ್ತ್ರ ವಿತರಣೆ

ಪೆರ್ಡೂರು: ಶ್ರಮಿಕ ತರುಣರ ತಂಡ ಸಂಘಟನೆಯಿಂದ ಸಮವಸ್ತ್ರ ವಿತರಣೆ

 


ಪೆರ್ಡೂರು: ಶ್ರಮಿಕ ತರುಣರ ತಂಡ ಸಂಘಟನೆ ವತಿಯಿಂದ  41 ನೇ ಶಿರೂರು ನ್ಯೂ ಕಲ್ಲಾಳ  ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಸಂತೋಷ್ ಕುಮಾರ್  ಬೈರಂಪಳ್ಳಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದರು.ಕಳೆದ  ಹಲವಾರು ವರ್ಷಗಳಿಂದ ಉಡುಪಿ ಜಿಲ್ಲಾ ಮಟ್ಟದಲ್ಲಿ ದುರ್ಬಲ ವರ್ಗದ ಜನರಿಗೆ ಸಹಾಯ ಹಸ್ತದೊಂದಿಗೆ ವಿವಿಧ ರೀತಿಯಲ್ಲಿ  ಈ ಸಂಘಟನೆ ನೆರವನ್ನು ನೀಡುತ್ತಿದೆ.

ಹಲವಾರು  ಯುವಕ ಯುವತಿಯರು ಸೇರಿಕೊಂಡು ಸಮಾಜದ ಬಡ ವರ್ಗದ ಜನರಿಗೆ ಡಾ ಸಂತೋಷ್ ಕುಮಾರ್ ಬೈರಂಪಳ್ಳಿಯವರ ನೇತೃತ್ವದಲ್ಲಿ ಸೂರು ನಿರ್ಮಾಣ ಕಾರ್ಯದಿಂದ ಪ್ರಾರಂಭಗೊಂಡು ಈಗ ಜನ ಮಾನಸದಲ್ಲಿ ನೂರಾರು ಸೇವಾಕಾರ್ಯದಿಂದ ಶ್ರಮಿಕರು ಪ್ರೀತಿಯ  ವಿಶ್ವಾಸದ ಚಾಪನ್ನು ಮೂಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಸದಾಶಿವ ಶೆಟ್ಟಿ, ಶಾಲಾ SDMC ಅಧ್ಯಕ್ಷರು ಮಂಜುಳಾ ತಂಡದ ಗೌರವಾಧ್ಯಕ್ಷರಾದ ರಘುನಾಥ ಪೂಜಾರಿ, ಉಪಾದ್ಯಕ್ಷರಾದ ಸಂದೀಪ್ ಪೂಜಾರಿ ಮಹಿಳಾ ಘಟಕದ ಅಧ್ಯಕ್ಷರು ಸಂಪ ಪೂಜಾರಿ,ಉಪಾದ್ಯಕ್ಷರಾದ ಶಶಿಕಲಾ ಪೂಜಾರಿ, ಪ್ರ ಕಾರ್ಯದರ್ಶಿ ಕವಿತಾ ಉದಯ್ ಸದಸ್ಯರು ಸುಗಂಧಿ ಪೂಜಾರಿ ,ವಿಜಯ್ ಕುಮಾರ್ ಪ್ರವೀಣ್ ಕುಮಾರ್, ಶಾಲಾ ಶಿಕ್ಷಕ ವೃಂದ, ಪುಟಾಣಿ ಮಕ್ಕಳು  ಮತ್ತು  ಗ್ರಾಮಸ್ಥರು ಉಪಸಿತರಿದ್ದರು.

Ads on article

Advertise in articles 1

advertising articles 2

Advertise under the article