ಉಡುಪಿ: ಕಾಂಗ್ರೆಸಿನ 'ಫೈಬರ್' ಅಪಪ್ರಚಾರಕ್ಕೆ ಕೊನೆ ಮೊಳೆ ಹೊಡೆದ ತಮ್ಮದೇ ಸರ್ಕಾರದ ತಜ್ಞರ ವರದಿ- ಬಿಜೆಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ

ಉಡುಪಿ: ಕಾಂಗ್ರೆಸಿನ 'ಫೈಬರ್' ಅಪಪ್ರಚಾರಕ್ಕೆ ಕೊನೆ ಮೊಳೆ ಹೊಡೆದ ತಮ್ಮದೇ ಸರ್ಕಾರದ ತಜ್ಞರ ವರದಿ- ಬಿಜೆಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ

 

ಉಡುಪಿ: ಕಾರ್ಕಳ ತಾಲೂಕಿನ ಉಮ್ಮಿಕಲ್ ಬೆಟ್ಟದ ಪರಶು ರಾಮ್ ಥೀಮ್ ಪಾರ್ಕ್ ನಲ್ಲಿ ನಿರ್ಮಿಸಲಾದ ಪರಶುರಾಮನ ಮೂರ್ತಿ ಫೈಬರ್ ಪ್ರತಿಮೆ ಅಲ್ಲ ಎಂಬುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತದ ಬಗೆ ಮಾಧ್ಯಮದಲ್ಲಿ ಪ್ರಕಟವಾಗಿದೆ.ಈ ಮೂಲಕ ರಾಜ್ಯದಾದ್ಯಂತ ಫೈಬರ್ ಪ್ರತಿಮೆ ಎಂದು ಆಧಾರ ರಹಿತ ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸೋಲಾಗಿದೆ.

ಕಾಂಗ್ರೆಸ್ ನ ದ್ವೇಷದ ರಾಜಕಾರಣಕ್ಕೆ ಅಭಿವೃದ್ಧಿಯನ್ನೇ ಸಹಿಸಿಕೊಳ್ಳದ ಕಾಂಗ್ರೆಸ್ ಪಕ್ಷ ಉಡುಪಿಯ ಪ್ರವಾಸೋದ್ಯಮಕ್ಕೆ ಮುನ್ನುಡಿ ಆಗುತ್ತಿದ್ದ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕಾರ್ಪಣೆ ಆದ ಪರಶುರಾಮ ಥೀಮ್ ಪಾರ್ಕ್ ಅನ್ನು ಕಾಂಗ್ರೆಸ್ ಪಕ್ಷ ಮಿತಿ ಮೀರಿ ಅಪಪ್ರಚಾರ ಮಾಡುವ ಮೂಲಕ ಕೇವಲ ಕಾರ್ಕಳ ಕ್ಷೇತ್ರ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಪ್ರವಾಸೋದ್ಯಮದಲ್ಲಿ ಹಿನ್ನಡೆ ಉಂಟು ಮಾಡಿದೆ.

ಪ್ರತಿಮೆಯ ಸೊಂಟದ ಮೇಲ್ಭಾಗ ಮರು ವಿನ್ಯಾಸಕ್ಕೆ ತೆಗೆದು ಇಡಲಾಗಿತ್ತು, ಆದರೆ ಇದನ್ನೇ ತನ್ನ ರಾಜಕೀಯ ಬೇಳೆ ಬೇಯಿಸಲು ಬಳಸಿಕೊಂಡು ಕಾಂಗ್ರೆಸ್ ಫೈಬರ್ ಪ್ರತಿಮೆ ಎಂದು ಪ್ರವಾಸೋದ್ಯಮದಲ್ಲಿ ಹೊಸ ಭಾಷ್ಯ ಬರೆಬಹುದಿದ್ದ ಪರಶುರಾಮ ಥೀಮ್ ಪಾರ್ಕ್ ಗೆ ಸುಳ್ಳು ಪ್ರಚಾರದ ಮೂಲಕ ಉಡುಪಿ ಜಿಲ್ಲೆಯ ಧಾರ್ಮಿಕ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆ ಇಟ್ಟಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಈ ಯೋಜನೆಗೆ ತಾನು ತಡೆ ಹಿಡಿದಿರುವ ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಿ ಥೀಮ್ ಪಾರ್ಕ್ ಯೋಜನೆ ಪೂರ್ಣಗೊಳಿಸಿ ಪ್ರವಾಸೋದ್ಯಮ ಹಾಗೂ ಅಭಿವೃದ್ದಿಗೆ ಅನುವು ಮಾಡಬೇಕಾಗಿ ಆಗ್ರಹಿಸುತ್ತೇನೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಅವರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article