ಕಾಲಭೈರವ ದೇವಸ್ಥಾನದ ಮನವಿ ಪತ್ರ ಬಿಡುಗಡೆ

 


ಬೈಂದೂರು : ಇತಿಹಾಸ ಪ್ರಸಿದ್ದ ತಗ್ಗರ್ಸೆಯ ಕಾಲಭೈರವ ದೇವರ ನೂತನವಾಗಿ ನವೀಕರಣಗೊಳ್ಳುವ ದೇವಸ್ಥಾನದ ಮನವಿ ಪತ್ರವನ್ನು ತಿರುಮಲ ವೆಂಕಟರಮಣ ದೇವಸ್ಥಾನ ತಗ್ಗರ್ಸೆ ಇಲ್ಲಿ . ಹಿರಿಯ ಧಾರ್ಮಿಕ ಮುಖಂಡರಾದ ಶ್ರೀ ಟಿ. ನಾರಾಯಣ ಹೆಗ್ಡೆಯವರು ಅನಾವರಣಗೊಳಿಸಿದರು. ಈ ಸಮಯದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಗಣೇಶ್ ಬಳೆಗಾರ, ಕಾರ್ಯದರ್ಶಿ ನಾರಾಯಣ ಗಾಣಿಗ, ದೀಪಕ್ ಕುಮಾರ್ ಶೆಟ್ಟಿ, ಸುಧಾಕರ ಮೊಗವೀರ, ಗಣೇಶ ಬಿಲ್ಲವ, ಹರೀಶ್ ಬಳೆಗಾರ, ಸುಧೀರ ಶೆಟ್ಟಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.