ಉಡುಪಿ: "ವಿಷನ್ ಕರಾವಳಿ” ಸಂಘಟನೆಯ ನೂತನ ಅಧ್ಯಕ್ಷರಾಗಿ ಗಣೇಶ್ ಕುಂದರ್ ಕಲ್ಮಾಡಿ ಆಯ್ಕೆ



 

ಸಾಮಾಜಿಕ  ಕಳಕಳಿಯ ಉದ್ದೇಶ ಹೊಂದಿರುವ  “ವಿಷನ್ ಕರಾವಳಿ”   ಸಂಘಟನೆಯ   ಪದಾಧಿಕಾರಿಗಳನ್ನು ದಿನಾಂಕ 12 ಜುಲೈ ಆದಿತ್ಯವಾರದಂದು   ಮಲ್ಪೆಯ ಕಚೇರಿಯಲ್ಲಿ  ಸಭೆ ಕರೆದು  ನೇಮಕ ಮಾಡಲಾಯಿತು. 

ಅಧ್ಯಕ್ಷರಾಗಿ ಶ್ರೀ ಗಣೇಶ್ ಕುಂದರ್ ಕಲ್ಮಾಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಶ್ರೀ ಪ್ರಕಾಶ್ ಕೊಡವೂರು, ಶ್ರೀ ಭಾಸ್ಕರ ಕುಂದರ್ ಬೀಚ್, ಕರುಣಾಕರ ಕಾಂಚನ್ ಹಾಗೂ  ಪದ್ಮನಾಭ ಬಂಗೇರ ಇವರುಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಶ್ರೀ ರಾಮಪ್ಪ ಸಾಲ್ಯಾನ್ ಬಡನಿಡಿಯೂರು ಮತ್ತು ಶ್ರೀಮತಿ ಆಶಾ ಚಂದ್ರಶೇಖರ್ ಮಲ್ಪೆ ಕೊಳ,ಕಾರ್ಯದರ್ಶಿಯಾಗಿ ಶ್ರೀ ರಮೇಶ್ ಟಿ ಕರ್ಕೇರ, ಸಂಘಟನಾ ಕಾರ್ಯದರ್ಶಿಯಾಗಿ ವಿಜಯ ಕಿದಿಯೂರು,ಕೋಶಾಧಿಕಾರಿಯಾಗಿ ಮಧುಕರ ಸುವರ್ಣ ಮಲ್ಪೆ ಇವರುಗಳು ಆಯ್ಕೆಯಾದರು. 



ಸಮಿತಿ ಸದಸ್ಯರಾಗಿ ಯಾದವ ಅಮೀನ್ ಮಲ್ಪೆ, ಶೇಖರ್ ಸುವರ್ಣ, ಜನಾರ್ಧನ ಪಡುಕರೆ,ತರುಣ್ ಪಡುಕರೆ, ಪುರುಷೋತ್ತಮ ಪಾಳೆಕಟ್ಟೆ, ಮಾಧವ ಎಸ್ ಪುತ್ರನ್,ರಹಮತ್ ಮಲ್ಪೆ,ಸೂರಜ್ ಕರ್ಕೇರ , ಶೀಮತಿ ಬಬಿತಾ ಪಾಲನ್, ರಾಧಿಕಾ ಕೊಡವೂರು. ಪ್ರದೀಪ್ ಸುವರ್ಣ,ಹರಿಪ್ರಸಾದ್ ಸುವರ್ಣ,ಸಾಯಿರಾಜ್ ಕಿದಿಯೂರು,ಸುದರ್ಶನ್ ಪಡುಕರೆ, ಭರತ್ ಕಪ್ಪೆಟ್ಟು, ಆನಂದ ಕಾಂಚನ್,ಪ್ರವೀಣ್ ಜಿ ಕೊಡವೂರು,ಗಣೇಶ್ ಸುವರ್ಣ ಹನುಮಾನ್ ನಗರ,ಶಿವಾನಂದ ಸುವರ್ಣ ಹನುಮಾನ್ ನಗರ ಇವರುಗಳನ್ನು ನೇಮಕ ಮಾಡಲಾಯಿತು.