ಉಡುಪಿ:ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕ ಮಹಿಳೆಯರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮವು ಆದಿತ್ಯವಾರ (ಮಾರ್ಚ್ 8) ಸಂಜೆ ೪ ಗಂಟೆಗೆ ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಜರಗಲಿರುವುದು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕರು ಉದ್ಯಮಿಯಾದ ಶ್ರೀಮತಿ ವಿದ್ಯಾಲತಾ ಯು ಶೆಟ್ಟಿ,ಸಾಲಿಯತ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಹೂಡೆ ಪ್ರಾಂಶುಪಾಲರಾದ ಡಾ.ಸಬೀನ,
ಹಳ್ಳಿ ಬದುಕು ನಾಗಿ ಕುಲಾಲ್,ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಯ ಎಸ್ ಐ ವೈಲೆಟ್ ಫೆಮಿನಾ,ಸಮಾಜ ಸೇವಕರಾದ ಅನಿತಾ ಡಿಸೋಜಾ ಬೆಳ್ಮಣ್,ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಮಾಯ ಕಾಮತ್,ಉಡುಪಿ ನಗರಸಭೆಯ ಸಿಬ್ಬಂದಿ ಚಿತ್ರಲೇಖ ಚೌಡವ್ವನರ ರವರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ಮುಖ್ಯ ಅತಿಥಿಯಾಗಿ ಮಲ್ಪೆ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಅಧ್ಯಕ್ಷರಾದ ಸತೀಶ್ ಕುಂದರ್,ಪರ್ಫಾರ್ಮೆನ್ಸ್ ಕೋಚ್ , ಮೈಂಡ್ ಟ್ರೈನರ್ ಮತ್ತು ಥೆರಪಿಸ್ಟ್ ತನುಜಾಸ್ ಮೈಂಡ್ ಥೆರಪಿಯ ಸಂಸ್ಥಾಪಕಿ ತನುಜಾ ಮಾಬೆನ್,ರೂಪದರ್ಶಿ ವಿದ್ಯಾ ಸರಸ್ವತಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
