ಬಿಸಿ ರೋಡ್ ಯುವತಿಯ ಕೊಲೆ ಪ್ರಕರಣ: ಆರೋಪಿ ಚೇತನ್ ಪೊಲೀಸ್ ಬಲೆಗೆ !




ಬಂಟ್ವಾಳದ ಬಿಸಿರೋಡ್‌ನಲ್ಲಿ ನಿನ್ನೆ ( ಗುರುವಾರ ) ನಡೆದ ಯುವತಿಯ ಭೀಕರ ಹತ್ಯೆ ಪ್ರಕರಣ ಕರಾವಳಿ ಭಾಗವನ್ನು ಬೆಚ್ಚಿಬೀಳಿಸಿದೆ. ಲಾವಣ್ಯ ಎಂಬ ಯುವತಿಯನ್ನು ಚೇತನ್ ಎಂಬ ಯುವಕ ನಡುರೋಡಲ್ಲಿ ಕೊಚ್ಚಿ ಕೊಂದಿದ್ದು, ಆ ವಿಡಿಯೋ ಕೂಡ ಎಲ್ಲೆಡೆ ವೈರಲ್​ ಆಗಿ ಆತಂಕ ಹುಟ್ಟುಹಾಕಿತ್ತು. ಇದೀಗ ಈ ಪ್ರಕರಣದ ಆರೋಪಿ ಚೇತನ್​ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹತ್ಯೆ ಮಾಡಿ ಓಡಿ ಹೋಗಿದ್ದ ಚೇತನ್​ ಅರೆಸ್ಟ್​ ಆಗಿದ್ದಾನೆ.  ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ದೂರದ ಸಂಬಂಧಿಯಾಗಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.ಆದರೆ ಯುವತಿ ಪ್ರೀತಿಗೆ ನಿರಾಕರಿಸಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹರಾಶೆಗೊಂಡಿದ್ದ ಭಗ್ನಪ್ರೇಮಿ ಹಾಡಹಗಲೇ ಯುವತಿಯನ್ನು ಬೆನ್ನಟ್ಟಿ ತಲವಾರಿನಲ್ಲಿ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದ.