
ಯುಎಇ: ರೋಚಕ ಘಟಕ್ಕೆ ಏಷ್ಯಾ ಕಪ್ ಕ್ರಿಕೆಟ್ - ಭಾರತ ಪಾಕಿಸ್ತಾನ ನಡುವೆ ಏಷ್ಯಾ ಕಪ್ ಫೈನಲ್ ಪಂದ್ಯ
ಯುಎಇ: ಏಶ್ಯಾ ಕಪ್ ಸೂಪರ್ 4 ಸುತ್ತಿನಲ್ಲಿ ಬಾಂಗ್ಲಾದೇಶವನ್ನು ಮಣಿಸಿರುವ ಪಾಕಿಸ್ತಾನ ಎರಡನೇ ತಂಡವಾಗಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಈ ಮೊದಲು ಇದೇ ಬಾಂಗ್ಲಾದೇಶವನ್ನು ಮಣಿಸಿದ್ದ ಟೀಂ ಇಂಡಿಯಾ ಮೊದಲ ತಂಡವಾಗಿ ಫೈನಲ್ ಟಿಕೆಟ್ ಪಡೆದುಕೊಂಡಿತ್ತು. ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವೆ ಏಷ್ಯಾಕಪ್ ಫೈನಲ್ ಪಂದ್ಯ ನಡೆಯಲಿದೆ. ಈ ಟೂರ್ನಿಯಲ್ಲಿ ಉಭಯ ತಂಡಗಳ ನಡುವೆ ಮೂರನೇ ಮುಖಾಮುಖಿ ಇದಾಗಲಿದೆ. ಇದು ಮಾತ್ರವಲ್ಲದೆ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ನಿನ್ನೆಯ ಏಷ್ಯಾಕಪ್ ಸೂಪರ್ 4 ಸುತ್ತಿನಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ, ಬಾಂಗ್ಲಾದೇಶ ಬೌಲರ್‌ಗಳ ಮುಂದೆ ಅಗ್ರ ಕ್ರಮಾಂಕ ಮಂಡಿಯೂರಿತು. ಆರಂಭಿಕ ಸಾಹಿಬ್‌ಜಾದಾ ಫರ್ಹಾನ್ 4 ರನ್‌ಗಳಿಗೆ ಔಟಾದರು. ಸ್ಯಾಮ್ ಅಯೂಬ್ ಮತ್ತೊಮ್ಮೆ ಖಾತೆ ತೆರೆಯಲು ವಿಫಲರಾದರು. ಫಖರ್ ಜಮಾನ್ 13 ರನ್‌ಗಳಿಗೆ ಔಟಾದರೆ, ಹುಸೇನ್ ತಲಾತ್ 3 ರನ್‌ಗಳಿಗೆ ಔಟಾದರು.
ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನದ ಮಧ್ಯಮ ಕ್ರಮಾಂಕವೂ ಕೂಡ ರನ್ ಗಳಿಸಲು ಕಷ್ಟಪಡಬೇಕಾಯಿತು. ನಾಯಕ ಸಲ್ಮಾನ್ ಅಘಾ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದರು. ಸಲ್ಮಾನ್ 23 ಎಸೆತಗಳಲ್ಲಿ 19 ರನ್ ಗಳಿಸಿದರು. ಶಾಹೀನ್ ಅಫ್ರಿದಿ 13 ಎಸೆತಗಳಲ್ಲಿ 2 ಸಿಕ್ಸರ್‌ಗಳೊಂದಿಗೆ ನಿರ್ಣಾಯಕ 19 ರನ್ ಗಳಿಸಿ ಔಟಾದರು. ಪಾಕಿಸ್ತಾನ ಪರ ಮೊಹಮ್ಮದ್ ಹ್ಯಾರಿಸ್ ಅತ್ಯಧಿಕ 31 ರನ್‌ಗಳ ಇನ್ನಿಂಗ್ಸ್ ಆಡಿದರು.ವಾಸ್ತವವಾಗಿ ಬಾಂಗ್ಲಾದೇಶ ಹ್ಯಾರಿಸ್ಗೆ ಶೂನ್ಯಕ್ಕೆ ಜೀವದಾನ ನೀಡಿತು. ಹ್ಯಾರಿಸ್ ಇದರ ಲಾಭ ಪಡೆದು 31 ರನ್ ಗಳಿಸಿದರು. ಮೊಹಮ್ಮದ್ ನವಾಜ್ 15 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 1 ಸಿಕ್ಸರ್ ಸೇರಿದಂತೆ 25 ರನ್ ಗಳಿಸಿದರು. ಫಹೀಮ್ ಅಶ್ರಫ್ 9 ಎಸೆತಗಳಲ್ಲಿ 14 ರನ್, ಹ್ಯಾರಿಸ್ ರೌಫ್ 3 ರನ್ ಗಳಿಸಿ ಅಜೇಯರಾಗಿ ಉಳಿದರು.
11 ರನ್‌ಗಳಿಂದ ಸೋತ ಬಾಂಗ್ಲಾ
136 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ಶಾಹೀನ್ ಶಾ ಅಫ್ರಿದಿ ಮೊದಲ ಆಘಾತ ನೀಡಿದರು. ಮೊದಲ ಓವರ್‌ನಲ್ಲೇ ಪರ್ವೇಜ್ ಹೊಸೈನ್ ಎಮನ್ ಅವರನ್ನು ಔಟ್ ಮಾಡಿ , ತೌಹಿದ್ ಹೃದಯ್‌ರನ್ನು ಡಕ್ ಔಟ್ ಮಾಡಿದರು. ನಂತರ ಹ್ಯಾರಿಸ್ ರೌಫ್ ಬಾಂಗ್ಲಾದೇಶಕ್ಕೆ ಮೂರನೇ ಹೊಡೆತವನ್ನುನೀಡಿದರು. ಈ ಕಳಪೆ ಆರಂಭವು ಬಾಂಗ್ಲಾದೇಶದ ಇನ್ನಿಂಗ್ಸ್ ಅನ್ನು ಕುಂಠಿತಗೊಳಿಸಿತು. ಅಲ್ಲದೆ ತಂಡದ ಯಾವುದೇ ಬ್ಯಾಟ್ಸ್‌ಮನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿದು ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಲಿಲ್ಲ. ಹೀಗಾಗಿ ಬಾಂಗ್ಲಾದೇಶದ ಅರ್ಧದಷ್ಟು ಇನ್ನಿಂಗ್ಸ್ 63 ರನ್‌ಗಳಿಗೆ ಕುಸಿಯಿತು. ಆರಂಭಿಕ ಐದು ಬ್ಯಾಟ್ಸ್‌ಮನ್‌ಗಳಲ್ಲಿ ಯಾರೂ 20 ರನ್ ಗಳಿಸಲು ಸಾಧ್ಯವಾಗಲಿಲ್ಲ . ಪರಿಣಾಮವಾಗಿ, ಬಾಂಗ್ಲಾದೇಶ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 129 ರನ್ ಗಳಿಸಿ 11 ರನ್‌ಗಳಿಂದ ಪಂದ್ಯವನ್ನು ಸೋತಿತು.