ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ "ಡೈಮಂಡ್ ಮಂಗಳ ಸೂತ್ರ ಫೆಸ್ಟಿವಲ್"

ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ "ಡೈಮಂಡ್ ಮಂಗಳ ಸೂತ್ರ ಫೆಸ್ಟಿವಲ್"



ಉಡುಪಿ: ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್  ವತಿಯಿಂದ 'ಡೈಮಂಡ್ ಮಂಗಳ ಸೂತ್ರ ಫೆಸ್ಟಿವಲ್'  ಶುಕ್ರವಾರದಂದು ಅನಾವರಣ ಮಾಡಲಾಯಿತು.

ಗ್ರಾಹಕರಾದ ಡಾ.ವನಿತಾ ಗುರುದತ್ ,ಹಾಗೂ  ಪ್ರಶೀಲ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ಸಮೀರ್ ಮಂಗಳ ಸೂತ್ರ  ಫೆಸ್ಟಿವಲ್ ನ ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನು ನೀಡಿ ವಜ್ರಾಭರಣಗಳ ಮೇಲೆ ಶೇಕಡಾ.೩೦ರವರೆಗೆ ರಿಯಾಯಿತಿ, ಚಿನ್ನಾಭರಣ ಮೇಕಿಂಗ್ ಚಾರ್ಜ್ ಮೇಲೆ ಶೆ.೩೦ ರವರೆಗೆ ರಿಯಾಯಿತಿ ಪಡೆಯಬಹುದು. ಸೆಪ್ಟೆಂಬರ್ 26ರಿಂದ ಆರಂಭಗೊಂಡು ಅಕ್ಟೋಬರ್ 31 ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಮಂಗಳಸೂತ್ರ ಫೆಸ್ಟಿವಲ್ ಅನಾವರಣಗೊಳಿಸಿ ಉದ್ಘಾಟನಾ ಮಾತನಾಡಿದ ಡಾ.ವನಿತಾ ಗುರುದತ್ , ಮಲಬಾರ್  ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯಲ್ಲಿ  ಗ್ರಾಹಕರಿಗೆ ಬೇಕಾದಂತಹ  ಚಿನ್ನ ವಜ್ರಾಭರಣಗಳಿದೆ, ಗ್ರಾಹಕರಿಗೆ ಸೌಲಭ್ಯವನ್ನು ಉತ್ತಮವಾಗಿ ನೀಡುತ್ತಾರೆ. ವಿವಿಧ ಬಗೆಯ ಚಿನ್ನ, ವಜ್ರಾಭರಣಗಳು ಈ ಮಳಿಗೆಯಲ್ಲಿದ್ದು ಎಲ್ಲಾ ರೀತಿಯ ಗ್ರಾಹಕರಿಗೆ ಅನುಕೂಲಕ್ಕೆ ತಕ್ಕಂತೆ ಚಿನ್ನ, ವಜ್ರಾಭರಣ ನೋಡಬೇಕಿದ್ದರೆ ಇದೇ ಮಳಿಗೆಯಲ್ಲಿ ಲಭ್ಯವಿದೆ. ಸಾಧಕರನ್ನು ಗುರುತಿಸುವುದು, ಸಮಾಜಮುಖಿ ಕೆಲಸ  ಇವರಲ್ಲಿದ್ದು ಇಂತಹ ಮಹತ್ತರವಾದ ಕಾರ್ಯಕ್ರಮ ಮಾಡುವುದು ಬಹಳ ವಿಶೇಷತೆ ಇಂತಹ ಕಾರ್ಯಕ್ರಮ ಇನ್ನು ಮುಂದೆ ಆಗಲಿ ಎಂದು ಶುಭ ಹಾರೈಸಿದರು.

ಗ್ರಾಹಕರಾದ ಪ್ರಶೀಲ ಮಾತನಾಡಿ  ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್  ಹೊಸತನದ ಮೂಲಕ ವಜ್ರಾಭರಣಗಳನ್ನು ಗ್ರಾಹಕರಿಗೆ ಪರಿಚಯಿಸುವುದು ಇವರ ವಿಶೇಷತೆ ಎಂದು ಹೇಳಿದರು.

 ಶಾಖಾ ವ್ಯವಸ್ಥಾಪಕರಾದ ಪುರಂದರ ತಿಂಗಳಾಯ ,ಮಾರುಕಟ್ಟೆ ಮುಖ್ಯಸ್ಥರಾದ ತಂಝಿಮ್ ಶಿರ್ವ, ಡೈಮಂಡ್ ಮುಖ್ಯಸ್ಥರಾದ ಹರೀಶ್ ಎಂ ಜಿ, ಸಂದೀಪ್ ದಿವ್ಯಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಬ್ಬಂದಿ ವಿಘ್ನೇಶ್ ರೂಪಿಸಿ, ನಿತ್ಯಾನಂದ ನಾಯಕ್,ವಂದಿಸಿದರು.

Ads on article

Advertise in articles 1

advertising articles 2

Advertise under the article