
ಬೆಂಗಳೂರು: ಕಾಂತಾರ ಟ್ರೇಲರ್ ದಾಖಲೆ 107 ಮಿಲಿಯನ್ ವೀಕ್ಷಣೆ !
24/09/2025 03:59 AM
ಬೆಂಗಳೂರು: ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ 1 (Kantara Chapter 1) ಚಿತ್ರವು ಇದೇ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಇದರ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡಿದ್ದು ಭಾರಿ ಹಿಟ್ ಆಗಿದೆ
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ-ಚಾಪ್ಟರ್ 1 ಚಿತ್ರದ ಟ್ರೇಲರ್ 24 ಗಂಟೆಗಳಲ್ಲಿ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಮತ್ತು ಇನ್ಸ್ ಸ್ಟಾಗ್ರಾಮ್ ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 107 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಟ್ರೇಲರ್‌ನ ಎಲ್ಲಾ ಆವೃತ್ತಿಗಳಲ್ಲಿ 3.5 ಮಿಲಿಯನ್ ಗೂ ಹೆಚ್ಚು ಲೈಕ್‌ಗಳನ್ನು ಪಡೆದಿವೆ.
ವಿಶೇಷ ಎಂದರೆ ಕನ್ನಡ ಭಾಷೆಗಿಂತ ಹಿಂದಿ ಭಾಷೆಯ ಟ್ರೇಲರ್‌ಗೆ ಇದುವರೆಗಿನ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಕಾಂತಾರಾ ಚಿತ್ರದ ಕ್ರೇಝ್ ತೋರಿಸುತ್ತದೆ. ಕನ್ನಡ ಟ್ರೇಲರ್ 16 , ಮಿಲಿಯನ್ ವೀಕ್ಷಣೆ ಪಡೆದಿದ್ದರೆ ಹಿಂದಿ ಟ್ರೇಲರ್ 26 ಮಿಲಿಯನ್ ವೀಕ್ಷಣೆ ಪಡೆದುಕೊಂಡು ದಾಖಲೆ ನಿರ್ಮಿಸಿದೆ.