ಮಲ್ಪೆ: ಕರಾವಳಿ ಕಾಂಗ್ರೆಸ್ ನಿಂದ ಮತ್ಸ್ಯ ಸಂಪತ್ತಿಗಾಗಿ ಶಂಕರನಾರಾಯಣ ದೇಗುಲದಲ್ಲಿ ಪ್ರಾರ್ಥನೆ

ಮಲ್ಪೆ: ಕರಾವಳಿ ಕಾಂಗ್ರೆಸ್ ನಿಂದ ಮತ್ಸ್ಯ ಸಂಪತ್ತಿಗಾಗಿ ಶಂಕರನಾರಾಯಣ ದೇಗುಲದಲ್ಲಿ ಪ್ರಾರ್ಥನೆ

 

ಮಲ್ಪೆ:ಕರಾವಳಿ ಕಾಂಗ್ರೆಸ್ ವತಿಯಿಂದ  ಶನಿವಾರ  ಕೊಡವೂರು ಶ್ರೀ ಶಂಕರನಾರಾಯಣ ದೇಗುಲದಲ್ಲಿ ಈ ವರ್ಷದ ಮೀನುಗಾರಿಕೆಗೆ ಯಾವುದೇ ರೀತಿಯಲ್ಲಿ ಪ್ರಕೃತಿ ವಿಕೋಪ ಉಂಟಾಗದೆ , ಹೇರಳವಾಗಿ ಮತ್ಸ್ಯ ಸಂಪತ್ತು ಕರುಣಿಸಿ, ಸಮೃದ್ಧ ಮೀನುಗಾರಿಕೆ ನಡೆದು ಅದಕ್ಕೆ ಹೊಂದಿಕೊಂಡು ಇರುವ ಇತರ ಎಲ್ಲಾ ಉದ್ಯಮಗಳು ಅಭಿವೃದ್ಧಿಯಾಗಲಿ ಎಂದು ಜಗದೊಡೆಯ ಮಹಾತೋಭರ ಶ್ರೀ ಶಂಕರನಾರಾಯಣ ದೇವರಲ್ಲಿ ಭಕ್ತಿ ಪೂರ್ವಕವಾಗಿ ಸೇವೆ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಮಪ್ಪ ಸಾಲ್ಯಾನ್, ಪದ್ಮನಾಭ ಕಾಂಚನ್, ರಾಮದಾಸ್ ಕರ್ಕೇರ , ಗಣೇಶ್ ಕುಂದರ್, ಸುರೇಶ್ ಕಾಂಚನ್ , ಆನಂದ ಕಾಂಚನ್ , ಕರುಣಾಕರ್ ಕಾಂಚನ್, ತರುಣ್ ಪಡುಕರೆ, ವಿಲಾಸ್ ತೊಟ್ಟಂ, ಸೂರಜ್ ಕಲ್ಮಾಡಿ , ಕೃಷ್ಣ ಮೆಂಡನ್, ಪ್ರವೀಣ್ ಕೊಡವೂರ್, ಶೇಖರ್ ತಿಂಗಳಾಯ, ರಮೇಶ್ ತಿಂಗಳಾಯ, ರಮೇಶ್ ಟಿ ಕರ್ಕೇರ, ಭಾಸ್ಕರ್ ಕುಂದರ್,  ಪರುಷೋತ್ತಮ್, ದಿನೇಶ್ ಕಡೆಕಾರ್ , ವಿಜಯ ಕಿದಿಯೂರು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕೊಡವೂರ್, ಸದಸ್ಯರಾದ ಗುರುರಾಜ್, ಯಶೋಧರ್ ಸಾಲ್ಯಾನ್, ರಾಜ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article