
ಮುಂಬಯಿ: ಬರಲಿದೆ ಮಾಲೆಗಾಂವ್ ಸ್ಪೋಟ ಕಥಾಹಂದರದ 'ಮಾಲೆಗಾಂವ್ ಫೈಲ್ಸ್'
06/08/2025 11:56 AM
ಮುಂಬಯಿ: ನೈಜ ಘಟನೆಯನ್ನು ಆಧರಿಸಿದ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.2008ರಲ್ಲಿ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದ 'ಮಾಲೆಗಾಂವ್ ಸ್ಪೋಟ' ಕಥಾಹಂದರ ಹೊಂದಿದ ಸಿನಿಮಾ ಅದು.
ಈ ಸಿನಿಮಾಕ್ಕೆ 'ಮಾಲೆಗಾಂವ್ ಫೈಲ್ಸ್' (Malegaon Files) ಎನ್ನುವ ಟೈಟಲ್ ಇಡಲಾಗಿದೆ. ಬಾಲಿವುಡ್‌ನಲ್ಲಿ 'ಮೈ ಫ್ರೆಂಡ್ ಗಣೇಶ' ಎನ್ನುವ ಸಿನಿಮಾವನ್ನು ಮಾಡಿರುವ ನಿರ್ದೇಶಕ ರಾಜೀವ್ ಎಸ್ ರುಯಾ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಸಿನೆಡಸ್ಟ್ 18 ಫಿಲ್ಡ್ ಪ್ರೈ. ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಸಾಹಿಲ್ ಸೇಥ್ ಎನ್ನುವವರು ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ.ಸದ್ಯ ಈ ಸಿನಿಮಾ ಪ್ರೀ - ಪ್ರೊಡಕ್ಷನ್ ಹಂತದಲ್ಲಿದೆ.
"ಇದು ಕೇವಲ ಒಂದು ಸ್ಫೋಟದ ಕಥೆಯಲ್ಲ. ಆ ನಂತರದ ಘಟನೆಗಳ ಬಗ್ಗೆಯೂ ಇದರಲ್ಲಿದೆ. ವ್ಯಕ್ತಿಗಳ ಕಥೆ, ರಾಜಕೀಯ ನೆರಳು, ಸತ್ಯದ ಹುಡುಕಾಟ ಮತ್ತು ಆರೋಪಿಗಳು ಮತ್ತು ಬಲಿಪಶುಗಳ ಕುಟುಂಬಗಳು ಎದುರಿಸಿದ ಭಾವನಾತ್ಮಕ ಮತ್ತು ಕಾನೂನು ಹೋರಾಟದ ಸುತ್ತ ಚಿತ್ರದ ಕಥೆ ಸಾಗಲಿದೆ" ಎಂದು ಚಿತ್ರತಂಡ ಹೇಳಿದೆ.