ಉಡುಪಿ: ರಾಜ್ಯಾದ್ಯಂತ ಕನ್ನಡ ಬಿಗ್‌ಬಾಸ್ ಹವಾ ಜೋರಾಗಿ ಕೇಳಿ ಬರುತ್ತಿದ್ದು, ಅದರಲ್ಲೂ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ ಪ್ರೇಕ್ಷಕರ ಮನಗೆದ್ದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ನೈಜತೆ, ಸರಳತೆ ಮತ್ತು ಸ್ಪಷ್ಟ ಅಭಿಪ್ರಾಯಗಳ ಮೂಲಕ ಅಭಿಮಾನಿಗಳ ಬೆಂಬಲ ಪಡೆದುಕೊಂಡಿರುವ ರಕ್ಷಿತಾ ಶೆಟ್ಟಿ ಅವರಿಗೆ ಇದೀಗ ಭಾರೀ ಹಿಂಬಾಲಕರ ಪಡೆ ರೂಪುಗೊಂಡಿದೆ.
ಈ ಹಿನ್ನಲೆಯಲ್ಲಿ ಅಭಿಮಾನಿಗಳು ವಿಭಿನ್ನ ರೀತಿಯ ಪ್ರಚಾರಕ್ಕೆ ಮುಂದಾಗಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಮೂಲದ ಬ್ಯೂಟಿ ಪಾರ್ಲರ್ ಮಾಲೀಕರೊಬ್ಬರು, ಬಿಗ್‌ಬಾಸ್ ಸ್ಪರ್ಧೆಯಲ್ಲಿ ರಕ್ಷಿತಾ ಶೆಟ್ಟಿಗೆ 99 ವೋಟ್ ಮಾಡಿದವರಿಗೆ ಮೂರು ದಿನಗಳ ಉಚಿತ ಐಬ್ರೋ ಹೇರ್ ಕಟ್ ಹಾಗೂ ಫೇಶಿಯಲ್ ಸೇವೆ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಈ ವಿಶಿಷ್ಟ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಪೋಸ್ಟ್ ವೈರಲ್ ಆಗಿದೆ. ಅಭಿಮಾನಿಗಳ ಈ ಹೊಸ ಪ್ರಚಾರ ಕ್ರಮ ರಕ್ಷಿತಾ ಶೆಟ್ಟಿಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದು, ಬಿಗ್‌ಬಾಸ್ ಮತದಾನದಲ್ಲಿ ಇದರ ಪ್ರಭಾವ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
