ಉಡುಪಿ: ದ್ವೈವಾರ್ಷಿಕ ಪರ್ಯಾಯ ಕಾರ್ಯಕ್ರಮಕ್ಕೆ ಈ ಬಾರಿ ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಬರುತ್ತಿಲ್ಲ.
ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನದ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಎರಡು ದಿನಗಳ ಉಡುಪಿ ಜಿಲ್ಲಾ ಪ್ರವಾಸ ರದ್ದುಗೊಂಡಿದೆ.
ಸಚಿವರು ಭೀಮಣ್ಣ ಖಂಡ್ರೆ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೀದರ್ ಗೆ ತೆರಳಲಿದ್ದಾರೆ ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ. ಉಸ್ತುವಾರಿ ಸಚಿವೆ ತಿಂಗಳುಗಳ ಹಿಂದೆ ಉಡುಪಿ ಪ್ರವಾಸ ಕೈಗೊಂಡಿದ್ದರು.ಈ ಬಾರಿ ಪರ್ಯಾಯ ನೆಪದಲ್ಲಾದರೂ ಉಡುಪಿ ಗೆ ಬರುವ ನಿರೀಕ್ಷೆ ಇತ್ತು.ಆದರೆ ಕೊನೆಗಳಿಗೆಯಲ್ಲಿ ಪ್ರವಾಸ ರದ್ದಾಗಿದ್ದು ಕಾರ್ಯಕರ್ತರಿಗೆ ನಿರಾಸೆ ತಂದಿದೆ.
