![]() |
| ಪ್ರತಿಭಟನೆಯಲ್ಲಿ ಸಂಸದ ಕೋಟ |
ಉಡುಪಿ: ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಸ್ಥಳದಲ್ಲಿ ನಿರ್ಮಿಸಲಾದ ಮನೆ ಮತ್ತು ಶೆಡ್ ಗಳನ್ನು ಸೋಮವಾರ ತೆರವುಗೊಳಿಸಿದನ್ನು ಖಂಡಿಸಿ ಇಂದು ಪ್ರತಿಭಟನೆ ನಡೆಯಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.ಹೆಗ್ಗುಂಜೆ ಗ್ರಾಮದಲ್ಲಿ ಏಕಾಏಕಿ ಸೋಮವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ತಂದು ಅಲ್ಲಿದ್ದ ಎಲ್ಲಾ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಸರಕಾರಿ ಜಾಗದಲ್ಲಿ ಕೋಟಿಗಟ್ಟಲೇ ಮನೆ ಕಟ್ಟಿಕೊಂಡವರಿದ್ದಾರೆ, ಆದರೆ 20 ವರ್ಷಗಳಿಗೂ ಮಿಕ್ಕಿ ವಾಸ್ತವ್ಯ ಇದ್ದ ಬಡವರ ಮನೆಗಳನ್ನು ಕೆಡವಿದ್ದು ನಿಜಕ್ಕೂ ಆಕ್ಷೇಪಾರ್ಹ.ಸರಕಾರ ಮನಸು ಮಾಡಿದರೆ ಯಾವುದಾದರೂ ಮಾರ್ಗದಲ್ಲಿ ಬಡವರಿಗೆ ವಾಸ್ತವ್ಯ ಹೊಂದಲು ಅವಕಾಶಗಳಿವೆ.ಆದರೂ ಇಲ್ಲಿ ನೆಲಸಮ ಮಾಡಲಾಗಿದೆ.ಕಳೆದ ಎರಡೂವರೆ ವರ್ಷಗಳಿಂದ ಸರಕಾರ ಬಸವ ವಸತಿ ಯೋಜನೆಯಡಿಯಲ್ಲಿ ಒಂದೂ ಮನೆಯನ್ನು ನಿರ್ಮಿಸಿಲ್ಲ. ಹೀಗಿದ್ದರೂ ಬಡವರ ಮನೆಗಳನ್ನು ನೆಲಸಮ ಮಾಡಿರುವುದು ಅನ್ಯಾಯ ಎಂದು ಸಂಸದ ಕೊಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
