![]() |
| ತೆರವು ಕಾರ್ಯಾಚರಣೆ |
ಬ್ರಹ್ಮಾವರ : ತಾಲೂಕಿನ ಹೆಗ್ಗುಂಜೆ ಗ್ರಾಮದ ನಿರ್ಜಡ್ಡು ಪ್ರದೇಶದಲ್ಲಿರುವ ಸರ್ವೆ ನಂಬರ್ 162/1 ಮತ್ತು 171/1 ರ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 5 ತಾತ್ಕಾಲಿಕ ಶೆಡ್‌ಗಳು ಮತ್ತು ಒಂದು ಸ್ಲ್ಯಾಬ್ ಮನೆಯನ್ನು ಸೋಮವಾರ ಬೆಳಿಗ್ಗೆ ತೆರವುಗೊಳಿಸಲಾಯಿತು.
ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ನೇತೃತ್ವದಲ್ಲಿ, ವಿವಿಧ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ನಡೆಸಿದರು. ಭೂಕಂದಾಯ ನ್ಯಾಯಾಲಯ ಮತ್ತು ಲೋಕಾಯುಕ್ತದ ಆದೇಶದ ಮೇರೆಗೆ ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ಈ ಜಾಗದ ಕುರಿತು ಭೂಕಂದಾಯ ನ್ಯಾಯಾಲಯ ಮತ್ತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆಗೆ ನ್ಯಾಯಾಲಯದಿಂದ ಆದೇಶ ಬಂದಿತ್ತು. ಇದರ ಅನ್ವಯ, ಅಲ್ಲಿ ವಾಸವಾಗಿದ್ದವರಿಗೆ ತೆರವು ಮಾಡುವಂತೆ ನೋಟಿಸ್ ನೀಡಲಾಗಿದ್ದರೂ, ಅವರು ಜಾಗ ಖಾಲಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ, ಕಳೆದ ಗುರುವಾರ ಮಧ್ಯಾಹ್ನ 3 ಗಂಟೆಗೆ ಈ ಜಾಗದ ಕುರಿತು ಭೂಕಂದಾಯ ನ್ಯಾಯಾಲಯ ಮತ್ತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆಗೆ ನ್ಯಾಯಾಲಯದಿಂದ ಆದೇಶ ಬಂದಿತ್ತು. ಇದರ ಅನ್ವಯ, ಅಲ್ಲಿ ವಾಸವಾಗಿದ್ದವರಿಗೆ ತೆರವು ಮಾಡುವಂತೆ ನೋಟಿಸ್ ನೀಡಲಾಗಿದ್ದರೂ, ಅವರು ಜಾಗ ಖಾಲಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ, ಕಳೆದ ಗುರುವಾರ ಮಧ್ಯಾಹ್ನ 3 ಗಂಟೆಗೆ ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ತೆರಳಿದ್ದರು. ಆದರೆ, ಗ್ರಾಮಸ್ಥರಿಂದ ತೀವ್ರ ತಕರಾರು ಬಂದ ಕಾರಣ, ಮತ್ತು ಕಾರ್ಯಾಚರಣೆಗೆ ಬಂದಿದ್ದ ಜೆಸಿಬಿಗಳು ಕೆಲಸ ಮಾಡಲು ನಿರಾಕರಿಸಿದ ಕಾರಣ, ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ಸರ್ಕಾರಿ ಜಾಗದಲ್ಲಿ ಬೇರೊಬ್ಬರಿಗೆ ಹಣ ನೀಡಿ ಕುಡುಬಿ ಜನಾಂಗದ ಬೆಳ್ಳ ನಾಯ್ಡ್ ಎಂಬುವರು ಈ ಸ್ಲ್ಯಾಬ್ ಮನೆ ನಿರ್ಮಾಣ ಮಾಡುತ್ತಿದ್ದರು. ಅನಾರೋಗ್ಯದ ಕಾರಣ, ಅವರು ಈ ಮನೆಯನ್ನು ತಮ್ಮ ಸಂಬಂಧಿ ದೇವಕಿ ಎಂಬುವವರಿಗೆ 2 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ದೇವಕಿ ಅವರು 3 ಲಕ್ಷ ರೂಪಾಯಿ ಸಾಲ ಮಾಡಿ, ಕೇವಲ ಒಂದು ವಾರದ ಹಿಂದಷ್ಟೇ ಮನೆಗೆ ಸ್ಲ್ಯಾಬ್ ಹಾಕಿಸಿದ್ದರು.
