ಬೆಳ್ತಂಗಡಿ ತಾಲೂಕಿಗೆ ಹೆಮ್ಮೆ ನಮ್ಮ ಪ್ರೀತಿಯ ಡಾ| ಔದ್ರಾಮ ಸರ್

 

ಡಾ.ಔದ್ರಾಮ್

*✍️ ದಾವೂದ್ ಉಜಿರೆ *

ಉಜಿರೆ: ಮರ್ಹೂಂ ಹಮ್ಮಬ್ಬ ಬ್ಯಾರಿ ಮತ್ತು ಖತೀಜಮ್ಮ ದಂಪತಿಗಳ ಪುತ್ರನಾಗಿ 1975ರಲ್ಲಿ ಉಜಿರೆಯಲ್ಲಿ ಜನಿಸಿದ ಡಾ| ಔದ್ರಾಮ  ಅವರು ಪ್ರಾಥಮಿಕ ಮತ್ತು ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಉಜಿರೆಯ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ 1996 ರಲ್ಲಿ BA ಪದವೀಧರ 3ನೇ ರ್ಯಾಂಕ್, 1998ರಲ್ಲಿ MA ಪದವೀಧರ ನಾಲ್ಕು ಚಿನ್ನದ ಪದಕದೊಂದಿಗೆ 1ನೇ ರ್ಯಾಂಕ್, PGD, HRM ಮತ್ತು MBA ಪದವೀಧರ KSOU ಮೈಸೂರಲ್ಲಿ, ಕರ್ನಾಟಕ ರಾಜ್ಯ ವಕೀಲ ವಿಶ್ವವಿದ್ಯಾಲಯದಲ್ಲಿ LLB ಪದವೀಧರ, ಹಂಪಿ ವಿಶ್ವವಿದ್ಯಾಲಯದಲ್ಲಿ PHD. ಇದೆಲ್ಲ ಇವರ ಕಲಿಕೆಯ ಉತ್ತುಂಗ.

ಹುದ್ದೆಗಳ ಜವಾಬ್ದಾರಿಯನ್ನು ಉಜಿರೆಯಿಂದಲೇ ಪ್ರಾರಂಭಿಸಿದ ಇವರು 1999ರಲ್ಲಿ ಲೆಕ್ಕ ಪರಿಶೋಧಕರು, 2000ದಲ್ಲಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಮ್ಯಾನೇಜರ್, 2000-2001ರಲ್ಲಿ SDM ಶಿಕ್ಷಣ ಸಂಸ್ಥೆಯಲ್ಲಿ ಲೆಕ್ಚರರ್, 2001ರಲ್ಲಿ ಪೊಲೀಸ್ ಸಬ್ ಇನ್ ಸ್ಪೆಕ್ಟರ್, ನಿಪ್ಪಾಣಿ, ಹುಬ್ಬಳ್ಳಿ ಪೇಟೆ, ರಾಯ್ ಬಾಗ್ ಪೊಲೀಸ್ ಸ್ಟೇಷನಲ್ಲಿ ಸಬ್ ಇನ್ ಸ್ಪೆಕ್ಟರ್ ಸೇವೆ, 2006 ರಲ್ಲಿ  KAS ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದಲ್ಲಿ ತೇರ್ಗಡೆ ಹೊಂದಿ ತಹಶೀಲ್ದಾರ್ ಆಗಿ ಭಡ್ತಿ ಹೊಂದಿ ಗೋಕಾಕ್, ಕಾರವಾರ, ಸಿಂದಗಿ, ವಿಜಯಪುರ, ಕುಮಟಾ ಮತ್ತು ಸುಳ್ಯದಲ್ಲಿ ಜವಾಬ್ದಾರಿ ನಿರ್ವಹಣೆ, 2012ರಲ್ಲಿ AC ಆಗಿ ಮತ್ತು 2020ರಲ್ಲಿ DC ಆಗಿ ಭಡ್ತಿ, ವಿಶೇಷ ಭೂ ಸ್ವಾಧೀನ ಅಧಿಕಾರಿ, ಆಯುಕ್ತರು, ನಗರ ನಿಗಮ, ಸಹಾಯಕ ಕಮಿಷನರ್, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹೆಚ್ಚುವರಿ ಉಪ ಆಯುಕ್ತರು ವಿಜಯಪುರ, ಮುಖ್ಯ ಆಡಳಿತ ಅಧಿಕಾರಿ KNNL ಧಾರವಾಡ ಇಲ್ಲಿ ಎಲ್ಲಾ ತಮ್ಮ ಸೇವೆಯನ್ನು ನೀಡಿದ್ದಾರೆ.

ಪ್ರಸ್ತುತ ವಿಜಯಪುರದ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅತ್ಯಂತ ಸರಳ ಮತ್ತು ಸೌಮ್ಯ ಸ್ವಭಾವದ ಡಾ| ಔದ್ರಾಮ ಸರ್ ಅವರಿಗೆ ವಿವಿಧ ಇಲಾಖೆಯಲ್ಲಿನ ಸೇವೆಗಳಿಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿದೆ.

ಅಲ್ಲದೆ ಬಡ ಜನರ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಅವರು ಹಲವು ಜನರ ಜೀವನದ ಆಶಾಕಿರಣವಾಗಿದ್ದಾರೆ. ನಮ್ಮ ಬೆಳ್ತಂಗಡಿ ತಾಲೂಕಿಗೆ ಹೆಮ್ಮೆ ಮತ್ತು ಅಭಿಮಾನವಾದ ಡಾ| ಔದ್ರಾಮ ಸರ್ ಅವರಿಗೆ ಜಗತ್ಪಾಲಕನು ಆಯುರಾರೋಗ್ಯ ನೀಡಿ ಕರುಣಿಸಲಿ.