ಜ.17: ಶೀರೂರು ಪರ್ಯಾಯ ಪ್ರಯುಕ್ತ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ ‘ಮಿಸ್ಟರ್ ಉಡುಪಿ ಕ್ಲಾಸಿಕ್ – 2026’



ಉಡುಪಿ: ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಅವರ ಆಶ್ರಯದಲ್ಲಿ, ಉಡುಪಿ ನಾಡಹಬ್ಬ ‘ಶಿರೂರು ಪರ್ಯಾಯೋತ್ಸವ’ದ ಪ್ರಯುಕ್ತ ಪರ್ಯಾಯ ಮಿಸ್ಟರ್ ಉಡುಪಿ 2026 – ಕ್ಲಾಸಿಕ್ ಜಿಲ್ಲಾ ಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆ ರೂ. 5,85,000/- ಒಟ್ಟು ನಗದು ಬಹುಮಾನಗಳೊಂದಿಗೆ 2026ರ ಜನವರಿ 17ರಂದು, ಮದರ್ ಆಫ್ ಸೋರೋಸ್ ಚರ್ಚ್ ಮೈದಾನ, ಉಡುಪಿಯಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೊಶೀಯೇಶನ್ ಅಧ್ಯಕ್ಷರಾದ ಜೇಸನ್ ಡಾಯಸ್ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾರ್ಯಕ್ರಮದ ಉದ್ಘಾಟನೆ ಸಂಜೆ 6.00 ಗಂಟೆಗೆ ನಡೆಯಲಿದ್ದು, ಸ್ಪರ್ಧೆಗಳು ಸಂಜೆ 7.00 ಗಂಟೆಯಿಂದ ಆರಂಭವಾಗಲಿದೆ.


ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಗೆ “”ಐಬಿಬಿಎಫ್ (IBBF)”ನಿಂದ ಆಯ್ಕೆಯಾದ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ನ್ಯಾಯಾಧೀಶರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ.


ಸ್ಪರ್ಧಾ ವಿಭಾಗಗಳು ಮತ್ತು ಬಹುಮಾನಗಳು

ಪರ್ಯಾಯ ಮಿಸ್ಟರ್ ಉಡುಪಿ ಕ್ಲಾಸಿಕ್ 2026 ಸ್ಪರ್ಧೆ 55, 60, 65, 70, 75, 80 ಹಾಗೂ 80 ಕಿಲೋಗ್ರಾಂಗಿಂತ ಮೇಲ್ಪಟ್ಟಂತೆ ಒಟ್ಟು 7 ತೂಕ ವರ್ಗಗಳಲ್ಲಿ ನಡೆಯಲಿದೆ.


ಒಟ್ಟು ಪ್ರಶಸ್ತಿ ಮೊತ್ತ ರೂ.5,85,000 ಆಗಿದೆ.

• ಟೈಟಲ್ ವಿಜೇತರಿಗೆ ರೂ.1,50,000 ನಗದು ಬಹುಮಾನ ಮತ್ತು ಟ್ರೋಫಿ

• ರನ್ನರ್ ಅಪ್ ರೂ.50,000

• ಟೈಟಲ್ ವಿಜೇತ ಕೋಚ್ಗೆ ರೂ.25,000

(ಒಟ್ಟು: ರೂ.2,25,000)

ಪ್ರತಿ ತೂಕ ವರ್ಗದಲ್ಲಿ ಟಾಪ್ 5 ಸ್ಥಾನ ಗಳಿಸಿದವರಿಗೆ ಕ್ರಮವಾಗಿ ರೂ.10,000, ರೂ.8,000, ರೂ.6,000, ರೂ.4,000 ಮತ್ತು ರೂ.2,000 ಬಹುಮಾನ ನೀಡಲಾಗುತ್ತದೆ. ಈ ಮೂಲಕ 7 ವಿಭಾಗಗಳಿಗೆ ಒಟ್ಟು ರೂ.2,10,000 ಬಹುಮಾನ ವಿತರಿಸಲಾಗುತ್ತದೆ.

ಬೆಸ್ಟ್ ಪೋಸರ್ ಸ್ಪರ್ಧೆ

ದೇಹಸೌಷ್ಟವ ಸ್ಪರ್ಧಿಗಳಿಗಾಗಿ ಮಾತ್ರ ‘ಬೆಸ್ಟ್ ಪೋಸರ್’ ಸ್ಪರ್ಧೆ ಆಯೋಜಿಸಲಾಗಿದ್ದು, ಒಂದು ನಿಮಿಷದ ಫ್ರೀ ಪೋಸಿಂಗ್ ಅವಕಾಶ ನೀಡಲಾಗುತ್ತದೆ. ಅತ್ಯಾಕರ್ಷಕ ಪೋಸರ್ಗೆ ರೂ.15,000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತದೆ.


ಮೆನ್ಸ್ ಫಿಸಿಕ್ ವಿಭಾಗ

ಮೆನ್ಸ್ ಫಿಸಿಕ್ ಸ್ಪರ್ಧೆ ಒಂದೇ ಗುಂಪಿನಲ್ಲಿ ನಡೆಯಲಿದ್ದು, ಟಾಪ್ 5 ಸ್ಥಾನ ಗಳಿಸಿದವರು ಟೈಟಲ್ ಗೆ ಸ್ಪರ್ಧಿಸಲಿದ್ದಾರೆ.

• ಟೈಟಲ್ ವಿಜೇತ – ರೂ.40,000

• ದ್ವಿತೀಯ – ರೂ.25,000

• ತೃತೀಯ – ರೂ.20,000

• ಚತುರ್ಥ – ರೂ.15,000

• ಪಂಚಮ – ರೂ.10,000

(ಒಟ್ಟು: ರೂ.1,10,000)


ಬೆಸ್ಟ್ ಕೋಚ್ ಪ್ರಶಸ್ತಿ

ಟೈಟಲ್ ವಿಜೇತನ ಕೋಚ್ ಗೆ ರೂ.25,000 ನಗದು ಬಹುಮಾನ ನೀಡಲಾಗುತ್ತದೆ.

ಉಡುಪಿ ಜಿಲ್ಲಾ ದೇಹಸೌಷ್ಟವ ನಿರ್ಮಾಪಕರ ಸಂಘ (UDABB)ವು ಪಾರ್ಯಾಯ ಮಿಸ್ಟರ್ ಉಡುಪಿ ಕ್ಲಾಸಿಕ್ 2026 ಅನ್ನು ಜಿಲ್ಲಾ ಮಟ್ಟದ ದೇಹಸೌಷ್ಟವ ಸ್ಪರ್ಧೆಗಳ ಇತಿಹಾಸದಲ್ಲಿ ಸ್ಮರಣೀಯ ಕಾರ್ಯಕ್ರಮವಾಗಿಸಲು ಮಾರ್ಗದರ್ಶನ, ಬೆಂಬಲ ಹಾಗೂ ಪ್ರೋತ್ಸಾಹ ನೀಡುತ್ತಿರುವ ಶ್ರೀ ಪ್ರಸಾದ್ರಾಜ್ ಕಂಚನ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.

ಪತ್ರಿಕಾಗೋಷ್ಠಿಯಲ್ಲಿ UDABB ಅಧ್ಯಕ್ಷ ಹಾಗೂ ಸಹ ಆಯೋಜಕ ಜೇಸನ್ ಡಯಾಸ್, ಸಹ ಆಯೋಜಕ ಉದ್ಯಮಿ ಮಿಥಿಲೇಶ್, ಕಾರ್ಯದರ್ಶಿ ವಿಶ್ವನಾಥ ಕಾಮತ್ ಮತ್ತು ಖಜಾಂಚಿ ಮೃತಿ ಜಿ. ಬಂಗೇರಾ, ಜೋನ್ಸನ್ ಡಿಸೋಜಾ ಉಪಸ್ಥಿತರಿದ್ದರು.