ನಿತ್ಯಾನಂದ ಕೆಮ್ಮಣ್ಣು ಅವರ 5 ನೇ ವರ್ಷದ ಪುಣ್ಯ ಸ್ಮರಣೆ ಹಾಗು ರಕ್ತದಾನ ಶಿಬಿರ ಕಾರ್ಯಕ್ರಮ

 


ಕೆಮ್ಮಣ್ಣಿನ ಲಿಟಲ್ ಫ್ಲವರ್ ಹಾಲ್ ನಲ್ಲಿ  ಭಾನುವಾರ ಜರಗಿತು. ಈ ಕಾರ್ಯಕ್ರಮ ನಿತ್ಯಾನಂದ ಅಭಿಮಾನಿ ಬಳಗ ,ಗ್ರಾಮೀಣ ಕಾಂಗ್ರೆಸ್ ಕೆಮ್ಮಣ್ಣು , ICYM. ಕೆಮ್ಮಣ್ಣು ,ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ,ಶ್ರೀ ಗಜಾನನ ಬಿಲ್ಲವರ ಸೇವಾ ಸಂಘ ಹೂಡೆ , ತೋನ್ಸೆ ಫ್ರೆಂಡ್ಸ್ ಹೂಡೆ ಹಾಗು ಉಡುಪಿ ಜಿಲ್ಲಾ ಸರಕಾರಿ  ರಕ್ತ ನಿಧಿ ವಿಭಾಗ ಆಸ್ಪತ್ರೆ ಅಜ್ಜರಕಾಡಿ ನ ಸಂಯುಕ್ತ  ಆಶ್ರಯದಲ್ಲಿ ಜರಗಿತು. 

ಕಾರ್ಯಕ್ರಮದಲ್ಲಿ ಅಥಿತಿಯಾಗಿ ಕೆಮ್ಮಣ್ಣು ಚರ್ಚ್ ನ ಧರ್ಮ ಗುರುಗಳು ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು ,ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕಾರ್ನೆಲಿಯೋ, ಗ್ರಾಮೀಣ ಕಾಂಗೇಸ್ ಅಧ್ಯಕ್ಷರಾದ ರಘುರಾಮ್ ಶೆಟ್ಟಿ, ಜನಾರ್ಧನ ತೋನ್ಸೆ ,ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ , ಕುಮಾರ್ ಸುವರ್ಣ, ಪ್ರಖ್ಯಾತ ಶೆಟ್ಟಿ,ಅಮೃತ್ ಶೆಣೈ ,ಕೀರ್ತಿ ಶೆಟ್ಟಿ, ರಮೇಶ್ ಕರ್ಕೇರ, ಉದಯ ಆಚಾರ್ಯ, ಪ್ರಶಾಂತ್ ಸುವರ್ಣ, ಸೂರ್ಯ ಸಾಲ್ಯಾನ್, ವಸಂತ್, ಯಶೋಧ , ಮಹೇಶ್, ಆಶಾ ಚಂದ್ರಶೇಖರ್, ಸುಂದರ್ ಶೆಟ್ಟಿ, ,.ನಿತ್ಯಾನಂದ ರ ಅಣ್ಣ ಓಂ ಪ್ರಕಾಶ್. ಗುರುರಾಜ್ ಭಟ್, ನೋಯೆಲ್ ಲೋಬೊ ಉಪಸ್ಥಿತರಿದ್ದರು. 

ರೋಹಿತಾಕ್ಷ, ರತನ್ ಸುವರ್ಣ, ಜಾಯ್ಸ್ಟನ್ ಡಿಸೋಜ,  ಆಸಿಫ್ ಹೂಡೆ , ಡಾ ವೀಣಾ ರವರ ಸಹಕಾರದೊಂದಿಗೆ ಶಿಬಿರ ಯಶಸ್ವಿಯಾಗಿ ನೆರವೇರಿತು.

ನಿತ್ಯಾನಂದರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಸ್ವಯಂ ಪ್ರೇರಿತರಾಗಿ ರಕ್ತ ದಾನವನ್ನು ಮಾಡಿದರು.ಇಲಿಯಾಸ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಣೆ ಮಾಡಿದರು.