ಕಾರ್ಕಳ ಉಪವಿಭಾಗದ ಡಿವೈಎಸ್‌ಪಿ ಆಗಿ ಎಸ್. ವಿಜಯ್ ಪ್ರಸಾದ್‌ ಅಧಿಕಾರ ಸ್ವೀಕಾರ

ಎಸ್ ವಿಜಯ್ ಪ್ರಸಾದ್

ಕಾರ್ಕಳ: ಕಾರ್ಕಳ ಉಪವಿಭಾಗದ ನೂತನ ಪೊಲೀಸ್ ಉಪಾಧೀಕ್ಷಕರಾಗಿ (DySP) ಎಸ್. ವಿಜಯ್ ಪ್ರಸಾದ್‌ ಅವರು ಅಧಿಕಾರ ಸ್ವೀಕರಿಸಿದರು.

1998ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಆರಂಭಿಸಿದ ವಿಜಯ್ ಪ್ರಸಾದ್ ಅವರು ದಾವಣಗೆರೆ, ಭದ್ರಾವತಿ ಹಾಗೂ ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2007ರಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್ ಆಗಿ ಪದೋನ್ನತಿ ಪಡೆದ ಇವರು ಹಾಸನ, ಹೊಳೆನರಸೀಪುರ, ಕುಶಾಲನಗರ, ಚಿಕ್ಕಮಗಳೂರು, ಅಂಕೋಲಾ ಹಾಗೂ ಈ ಹಿಂದೆ ಕಾರ್ಕಳದಲ್ಲೂ ಸೇವೆ ಸಲ್ಲಿಸಿದ್ದರು.

ಕಾರ್ಕಳ ಡಿವೈಎಸ್‌ಪಿ ಆಗಿದ್ದ ಇವರು ಬಳಿಕ ಕಾರವಾರ ಡಿ.ಸಿ.ಆ‌ರ್.ಬಿ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಅನಂತರ ಬಂಟ್ವಾಳ ಡಿವೈಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಇದೀಗ ಪುನಃ ಕಾರ್ಕಳ ಉಪವಿಭಾಗದ ಡಿವೈಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮಂಗಳೂರು ಲೋಕಾಯುಕ್ತ ವಿಭಾಗದಲ್ಲೂ ಕೆಲವು ವರ್ಷ ಇವರು ಸೇವೆ ಸಲ್ಲಿಸಿದ್ದರು.