ಕೇಜ್ರಿವಾಲ್ ಮತ್ತು ಆಪ್ ತಂಡಕ್ಕೆ ಬಿಗ್ ರಿಲೀಫ್ - ಮದ್ಯ ಹಗರಣದಲ್ಲಿ 23 ಆರೋಪಿಗಳು ಖುಲಾಸೆ



ಹೊಸದಿಲ್ಲಿ: 2025ರಲ್ಲಿ ದೆಹಲಿಯಲ್ಲಿ ಆಪ್‌ ಸೋಲಿಗೆ ಕಾರಣವಾಗಿದ್ದ ಮದ್ಯ ನೀತಿ ಹಗರಣ ಭಾರೀ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿರುವ ದೆಹಲಿ ನ್ಯಾಯಾಲಯ ಮಾಜಿ ಮುಖ್ಯಮಂತ್ರಿ ಮತ್ತು ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌, ಮಾಜಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೇರಿದಂತೆ ಎಲ್ಲಾ 23 ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಪ್ರಕರಣವನ್ನು ಸಿಬಿಐ ನಿರ್ವಹಿಸಿದ ರೀತಿಯನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ನ್ಯಾಯಾಲಯ, "ಸಿಬಿಐ ಕೇವಲ ಊಹೆಯ ಆಧಾರದ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿರುವುದನ್ನು ನೋಡಿದರೆ, ತನಿಖಾ ಸಂಸ್ಥೆಯೇ ಪಿತೂರಿ ನಿರೂಪಣೆ ಮಾಡಿರುವಂತಿದೆ" ಎಂದು ತೀವ್ರ ಅಸಮಾಧಾನ ಹೊರಹಾಕಿದೆ.23 ಆರೋಪಿಗಳ ಪೈಕಿ ಯಾರ ವಿರುದ್ಧವೂ ಪ್ರಾಥಮಿಕವಾಗಿ ಪ್ರಕರಣವನ್ನೇ ದಾಖಲಿಸಿಲ್ಲ. ಸಿಬಿಐ ಕೇವಲ ಊಹೆಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಗಂಭೀರ ಆರೋಪ ಮಾಡಿದೆ. ಇದು ತನಿಖಾ ಸಂಸ್ಥೆಯೇ ಹೆಣೆದಿರುವ ಪಿತೂರಿಯಂತಿದೆ" ಎಂದು ದೆಹಲಿ ಕೋರ್ಟ್‌ ನ್ಯಾಯಾಧೀಶರು ಹರಿಹಾಯ್ದರು.ಇನ್ನು ಮದ್ಯ ನೀತಿ ಹಗರಣದಲ್ಲಿ ತಮ್ಮನ್ನು ಕೋರ್ಟ್‌ ಖುಲಾಸೆಗೊಳಿಸುತ್ತಿದ್ದಂತೇ ಮಾಧ್ಯಮಗಳೆದುರು ಭಾವುಕರಾಗಿ ಮಾತನಾಡಿದ ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್ ಒಂದು ಸುದೀರ್ಘ ಯುದ್ಧ ಗೆದ್ದಿರುವುದಾಗಿ ಹೇಳಿದರು. ಇದೇ ವೇಳೆ ಆಪ್‌ ನಾಯಕ ತಮ್ಮನ್ನು "ಖಟ್ಟರ್‌ ಪ್ರಾಮಾಣಿಕ" ಎಂದು ಕರೆದುಕೊಂಡರು.