ಫಿಬಾ ಏಷ್ಯಾ ಅಧ್ಯಕ್ಷ ಗೋವಿಂದರಾಜ್ ಅವರಿಂದ ನಗೋಯದಲ್ಲಿ ಜಪಾನ್ ಚಕ್ರವರ್ತಿ ಮತ್ತು ಮಹಾರಾಣಿಯ ಭೇಟಿ

 

ಟೋಕಿಯೋ (ಜಪಾನ್) - ಫಿಬಾ ಏಷ್ಯಾ ಅಧ್ಯಕ್ಷ ಡಾ ಕೆ ಗೋವಿಂದರಾಜ್ ಮತ್ತು ಪದಾಧಿಕಾರಿಗಳು ಜಪಾನ್ ನ ನಗೋಯದಲ್ಲಿ ಜಪಾನ್ ನ ಚಕ್ರವರ್ತಿ ನರುಹಿಟೋ ಮತ್ತು ಮಹಾರಾಣಿ ಮಸಾಕೊ ಅವರನ್ನು ಅಪರೂಪದ ಭೇಟಿ ಮಾಡಿದರು.

ಚಕ್ರವರ್ತಿ ನರುಹಿಟೋ ಮತ್ತು ಮಹಾರಾಣಿ ಮಸಾಕೊ ಅವರು ಏಷ್ಯಾ ಖಂಡ ಮತ್ತು ಪ್ರಪಂಚದಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆಗೆ ಸಿಗುತ್ತಿರುವ ಪೋತ್ಸಾಹ ಮತ್ತು ಅದರ ಬೆಳವಣಿಗೆ ಬಗ್ಗೆ ಗೋವಿಂದರಾಜ್ ಅವರಿಂದ ಮಾಹಿತಿ ಪಡೆದರು.ಫಿಬಾ ಏಷ್ಯಾ ಒಕ್ಕೂಟಕ್ಕೆ ಅವರು ಶುಭ ಹಾರೈಸಿದರು.

ತಮಗೆ ಈ ಅಪರೂಪದ, ಸ್ಮರಣೀಯ ಭೇಟಿಯ ಅವಕಾಶ ಕಲ್ಪಿಸಿದ ಚಕ್ರವರ್ತಿ ಮತ್ತು ಮಹಾರಾಣಿ ಅವರಿಗೆ ಫಿಬಾ ಏಷ್ಯಾ ಪರವಾಗಿ ಗೋವಿಂದರಾಜ್ ಕೃತಜ್ಞತೆ ಸಲ್ಲಿಸಿದರು.