ಉಡುಪಿ: ಕಸ್ತೂರಿ ರಂಗನ್ ವರದಿ ಜಾರಿಗೆ ಮುನ್ನ ಆ ಭಾಗದ ಜನರ ಅಹವಾಲಿಗೆ ಧ್ವನಿಯಾಗಿ : ಅಮಿತ್ ಶಾ ಗೆ ಪೇಜಾವರ ಶ್ರೀ ಸಲಹೆ

 


ಉಡುಪಿ: ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಆತಂಕ ಭಯ ಗೊಂದಲಗಳನ್ನು ನಿವಾಸರಿಸಲು ಆದ್ಯತೆ ನೀಡಬೇಕು ಎಂದು  ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಗೆ ಸಲಹೆ ನೀಡಿದ್ದಾರೆ. ಸೋಮವಾರ ನವದೆಹಲಿಯ ವೇದವ್ಯಾಸ ಗುರುಕುಲದಲ್ಲಿ  ತಮ್ಮನ್ನು ಭೇಟಿ ಮಾಡಿದ ಅಮಿತ್ ಶಾ ಅವರಿಗೆ ಲಿಖಿತ ಪ್ರಸ್ತಾವನೆಯಲ್ಲಿ ಈ ಸಲಹೆಯನ್ನು ಸ್ವಾಮೀಜಿಯವರು ನೀಡಿದ್ದಾರೆ ..ಈ ಬಗ್ಗೆ ಖಂಡಿತ ವಿಚಾರ ಮಾಡುವುದಾಗಿ ಶಾ ತಿಳಿಸಿದರು ಎಂದು ಮಠದ ಪ್ರಕಟಣೆ ತಿಳಿಸಿದೆ.