ಉಡುಪಿ: ಪಿತ್ರೋಡಿಯ ಸದಿಯ ಸಾವುಕಾರ್ ಪ್ರೈಮರಿ ಸ್ಕೂಲಿನಲ್ಲಿ ಮಕ್ಕಳ ಪ್ರೀತಿಯ ಟೀಚರ್ ಆಗಿದ್ದು, ಊರಿನವರ ಗೌರವಕ್ಕೆ ಪಾತ್ರರಾಗಿದ್ದ ಕುತ್ಪಾಡಿ ಕಾನಂಗಿ ದೇವಸ್ಥಾನದ ಸಮೀಪದ ದೇವಿಕೃಪಾದ ನಿವಾಸಿ ಸಾಮಾಜಿಕ ಮುಂದಾಳಾಗಿದ್ದ ದಿ.ಅಂಗರ ತಿಂಗಳಾಯರ ಧರ್ಮಪತ್ನಿ ಶ್ರೀಮತಿ ದೇವಕಿ (83) ಯವರು ಇಂದು ಸೆ.8 ರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ನಿಡಂಬೂರು ಯುವಕ ಮಂಡಲದ ನಿಕಟಪೂರ್ವ ಗೌರವಾಧ್ಯಕ್ಷರಾದ ದೀಪಕ್ ರಾಜ್, ಉದ್ಯಮಿ ದಿಲೀಪ್ ರಾಜ್ ಮತ್ತು ಮಗಳು , ಮೊಮ್ಮಕ್ಕಳು, ಬಂಧುಬಳಗ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.
ಮೇತರ ಅಂತಿಮ ಕ್ರಿಯಾವಿಧಿಯು ಕುತ್ಪಾಡಿಯಲ್ಲಿನ ಅವರ ಮನೆಯಲ್ಲಿ ನಡೆಯಲಿದ್ದು, ತದನಂತರ ಉದ್ಯಾವರದ ಹಿಂದು ರುದ್ರಭೂಮಿಯಲ್ಲಿ ಅಗ್ನಿಸ್ಪರ್ಶ ಮಾಡಲಾಗುವುದು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
