ಮಂಗಳೂರು : ಮಂಗಳೂರು ಹೊರವಲಯದ ಎಂಆರ್ ಪಿಎಲ್ ಘಟಕದಲ್ಲಿ ಇಂದು ಭಾರೀ ಸ್ಪೋಟದ ಶಬ್ದ ಕೇಳಿ ಬಂದಿದ್ದು, ಬೆಂಕಿ ಹಾಗೂ ಹೊಗೆ ಆಕಾಶದೆತ್ತರಕ್ಕೆ ಕಾಣಿಸಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾವ ಕಾರಣಕ್ಕೆ ಸ್ಪೋಟ ಉಂಟಾಗಿದೆ. ಹಾಗೂ ಹಾನಿ ಬಗ್ಗೆ ಮಾಹಿತಿ ಇನ್ನೂ ಲಭ್ಯಲಾಗಿಲ್ಲ. ಸ್ಫೋಟದ ತೀವ್ರತೆಗೆ ಬೃಹತ್ ಶಬ್ದ ಕೇಳಿಬಂದ ಬೆನ್ನಲ್ಲೇ ಆಕಾಶದಲ್ಲಿ ದಟ್ಟವಾದ ಹೊಗೆಯ ಮೋಡಗಳು ಕಾಣಿಸಿಕೊಂಡಿವೆ. ಈ ಹೊಗೆಯ ಪ್ರಮಾಣ ಹೆಚ್ಚಾಗಿದ್ದು, ಸುತ್ತಮುತ್ತಲಿನ ಜೋಕಟ್ಟೆ, ಬಾಳ ಹಾಗೂ ಸುರತ್ಕಲ್ ಪ್ರದೇಶಗಳಿಗೂ ಆವರಿಸಿದೆ. ಇದ್ದಕ್ಕಿದ್ದಂತೆ ಸಂಭವಿಸಿದ ಈ ಘಟನೆಯಿಂದಾಗಿ ಆಸುಪಾಸಿನ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.
