ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲೆ ಅಧ್ಯಕ್ಷರಾಗಿ ಆಯ್ಕೆಯಾದ ಅಶ್ರಫ್ ಅಡ್ಡೂರು ಅವರಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಅಭಿನಂದನೆ

 



ಮಂಗಳೂರು: ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಶ್ರಫ್ ಅಡ್ಡೂರು ಅವರಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಮಂಗಳೂರು ನಗರ ಜಿಲ್ಲೆ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.



ಸಂಘಟನೆಯ ಬೆಳವಣಿಗೆ, ಜನಪರ ಹೋರಾಟಗಳು ಹಾಗೂ ಸಾಮಾಜಿಕ ನ್ಯಾಯದ ಪರವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಶ್ರಫ್ ಅಡ್ಡೂರು ಅವರು ತಮ್ಮ ಸಮರ್ಪಣೆ, ಪರಿಶ್ರಮ ಮತ್ತು ನಾಯಕತ್ವದ ಮೂಲಕ ಈ ಜವಾಬ್ದಾರಿಗೆ ಆಯ್ಕೆಯಾಗಿರುವುದು ಸಂತಸದ ವಿಷಯವಾಗಿದೆ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ತಿಳಿಸಿದೆ.

ಅವರ ನಾಯಕತ್ವದಲ್ಲಿ ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲೆ ಇನ್ನಷ್ಟು ಬಲಿಷ್ಠವಾಗಿ ಬೆಳೆದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸಾಮಾಜಿಕ ಸೌಹಾರ್ದತೆ, ನ್ಯಾಯ ಮತ್ತು ಅಭಿವೃದ್ಧಿಯ ಪರವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಲ್ಲಾಹನು ಅವರಿಗೆ ಉತ್ತಮ ಆರೋಗ್ಯ, ಹಿಕ್ಮತ್, ತಾಳ್ಮೆ ಹಾಗೂ ಯಶಸ್ಸನ್ನು ಅನುಗ್ರಹಿಸಿ, ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ತೌಫೀಕ್ ನೀಡಲಿ ಎಂದು ಹಾರೈಸಲಾಗಿದೆ.

ಆಯಿಷಾ ಯಾಸ್ಮಿನ್

ಅಧ್ಯಕ್ಷರು

ವಿಮೆನ್ ಇಂಡಿಯಾ ಮೂವ್ಮೆಂಟ್ (WIM)

ಮಂಗಳೂರು ನಗರ ಜಿಲ್ಲೆ