ಈದ್ ಹಬ್ಬ - ಸೌಹಾರ್ದತೆಯ ಸಂಕೇತ ವಾಗಿರಬೇಕು

 


ಉಡುಪಿ ಹಾಶಿಮಿ ಮಸೀದಿಯ ಇಮಾಮರಾದ ಮೌಲಾನಾ ಒಬೈದುರ್ ರಹ್ಮಾನ್ ನದ್ವಿ ಅವರು ಮುಸ್ಲಿಮರಿಗೆ ಈದ್ ಹಬ್ಬ, ಶಾಂತಿ, ಏಕತೆ, ಸಹೋದರತ್ವ ಮತ್ತು ಸೌಹಾರ್ದತೆಯ ಮಾದರಿಯಾಗುವಂತೆ ಕರೆ ನೀಡಿದ್ದಾರೆ.

ಈದ್ ಅಲ್ ಅಧಾ ಪ್ರಯುಕ್ತ ಅವರು ಇಂದು ಮುಸ್ಲಿಮರನ್ನು ಉದ್ದೇಶಿಸಿ ಕರೆ ನೀಡಿದರು.



ಇದಲ್ಲದೆ, ಹೆಲ್ಮೆಟ್ ಹಾಗೂ  ಲೈಸನ್ಸ್ ಇಲ್ಲದೆ  ಅತಿವೇಗವಾಗಿ ದ್ವಿಚಕ್ರ ವಾಹನ ಹಾಗೂ ಕಾರ್ ಚಲಾಯಿಸುವ, ಅಲ್ಲದೆ ಮಾದಕ ದ್ರವ್ಯ ಸೇವಿಸುವ ಬಗ್ಗೆ ತಮ್ಮ ಮಕ್ಕಳ ಮೇಲೆ ಪೋಷಕರು ವಿಶೇಷ ಗಮನವಿಟ್ಟು ನಿಗಾ ವಹಿಸಬೇಕು.  ಅಪಘಾತಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸಬೇಕು ಎಂದು ಅವರು ಒತ್ತಿಹೇಳಿದರು.

ಮಹಿಳೆಯರು ಅಧಿಕ ಸಂಖ್ಯೆಯೆಲ್ಲಿ ಈದ್ ಪ್ರಾರ್ಥನೆಯೆಲ್ಲಿ ಪಾಲ್ಗೊಂಡಿದ್ದರು.

ಮಸೀದಿಯ ಅಧ್ಯಕ್ಷರಾದ ಜಕ್ರಿಯ ಅಸ್ಸದಿ, ಸಾಮಾಜಿಕ ಕಾರ್ಯಕರ್ತ ಹಾಗೂ ಮಸೀದಿಯ ಕಾರ್ಯದರ್ಶಿಯಾದ ಎಂ. ಇಕ್ಬಾಲ್ ಮನ್ನಾರವರು ಎಲ್ಲಾ ಮುಸ್ಲಿಮ್ ಬಂಧವರೀಗೆ ಈದ್ ಶುಭಾಶಯವನ್ನು ಸಲ್ಲಿಸಿದರು.