ಮೌನವಲ್ಲ ಹೋರಾಟ – ಮಹಿಳೆಯರಿಗೆ ನ್ಯಾಯ: ರಾಜ್ಯಾದ್ಯಂತ "ವಿಮ್ " ವತಿಯಿಂದ ಮಹಿಳಾ ದಿನಾಚರಣೆ



ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕದ ವತಿಯಿಂದ “ಮೌನವಲ್ಲ ಹೋರಾಟ, ಮಹಿಳೆಯರಿಗೆ ನ್ಯಾಯ” ಎಂಬ ಘೋಷಣೆಯೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಮಹಿಳೆಯರ ಹಕ್ಕುಗಳು, ಸುರಕ್ಷತೆ ಮತ್ತು ಗೌರವವನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ರಾಜ್ಯದ  ಹಲವು ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳು,ಸಭಾ ಕಾರ್ಯಕ್ರಮಗಳು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರಿಗೆ ಸನ್ಮಾನ, ವೃದ್ಧಾಶ್ರಮ ಭೇಟಿ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮುಂತಾದ ಸೇವಾ ಕಾರ್ಯಗಳು  ನಡೆಯಿತು. 

ಮಹಿಳಾ ದೌರ್ಜನ್ಯದ ವಿರುದ್ಧ ಪೊಲೀಸ್ ಅಧೀಕ್ಷಕರಿಗೆ ಮನವಿ ಪತ್ರ ಸಲ್ಲಿಕೆ ಮಹಿಳೆಯರ ಹಕ್ಕುಗಳು ಮತ್ತು ಗೌರವದ ಕುರಿತಾಗಿ ವಿಚಾರ ಸಂಕಿರಣಗಳು, ಮಹಿಳೆಯರ ಅರಿವು ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸುವ ಉದ್ದೇಶದಿಂದ ಕ್ವಿಜ್ ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಯಿತು.

ಇದರೊಂದಿಗೆ ಸರ್ಕಾರವು ಎಲ್ಲಾ ವಯೋಮಾನದ ಮಹಿಳೆಯರಿಗೆ ಸ್ವ ರಕ್ಷಣಾ ತರಬೇತಿಯ ಯೋಜನೆ ರೂಪಿಸಬೇಕು, ಕಾನೂನು ಚೌಕಟ್ಟನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು, ಮಹಿಳೆಯರು ದುರ್ಬಲರೆಂಬ ಮನೋಭಾವವನ್ನು ಬದಲಿಸಿ ರಾಜಕೀಯ ಮತ್ತು ಆಡಳಿತದಲ್ಲಿ ಸಮಾನ ಪ್ರಾತಿನಿಧ್ಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಯಿತು.. 

ರಾಜ್ಯಾದ್ಯಂತ ನಡೆಸಿದ ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ವಿವಿಧ ಸ್ತರದ ನಾಯಕಿಯರು ಹಾಗೂ ಕಾರ್ಯಕರ್ತೆಯರು ಭಾಗವಹಿಸಿದ್ದರು.