ಯುನೈಟೆಡ್ ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್‌ನ ಹೊಸ ಅಂತರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ



ಉಡುಪಿ: ಸುಮಾರು 45 ವರ್ಷಗಳಿಂದ ಕರಾಟೆ ಜಗತ್ತಿನಲ್ಲಿ ಅನುಭವ ಹೊಂದಿದ ಹಿರಿಯ ಕರಾಟೆ ಶಿಕ್ಷಕರ ಸಹಕಾರದಿಂದ ಅಸ್ತಿತ್ವಕ್ಕೆ ಬಂದಿದೆ.

ಇತ್ತೀಚೆಗೆ ಉಡುಪಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಯುನೈಟೆಡ್ ಕರಾಟೆ ಬುಡೋಕಾನ್ ಇಂಟರ್‌ನ್ಯಾಷನಲ್‌ ನೂತನ ಪದಾಧಿಕಾರಿಗಳ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಕೆ. ಆನಂದ ದೇವಾಡಿಗ, ಮಣಿಪಾಲ.

ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್.ಎಂ, ಪುತ್ತೂರು.

ಹಿರಿಯ ಉಪಾಧ್ಯಕ್ಷರಾಗಿ ಪ್ರಭಾಕರ ಕುಂದರ್, ಮಲ್ಪೆ, ತಾಂತ್ರಿಕ ನಿರ್ದೇಶಕರಾಗಿ ಬಾಲಕೃಷ್ಣ ಆಳ್ವ, ಮಂಗಳೂರು.

ಕೋಶಾಧಿಕಾರಿಯಾಗಿ ಫೈಝಲ್ ಕೆ.ಪಿ., ಕುವೈಟ್.

ಉಪಾಧ್ಯಕ್ಷರಾಗಿ ಶಿವಾನಂದ್ ಸಾಲಿಯಾನ್, ದುಬೈ, ಗುರುಪ್ರಸಾದ್ ಕಾರಂತ್, ಉಡುಪಿ, ಗೋಪಾಲ್.ವಿ, ಪುತ್ತೂರು.

ಜೊತೆ ಕಾರ್ಯದರ್ಶಿಯಾಗಿ ಅಮರನಾಥ ಶೆಟ್ಟಿ, ಬೆಂಗಳೂರು. ಅಬ್ದುಲ್ ಬಾರಿ, ಬಳ್ಳಾರಿ.

ವೆಬ್ ಸೈಟ್ ಜವಾಬ್ದಾರಿ ಮತ್ತು ಸಂಪರ್ಕ ಅಧಿಕಾರಿಗಳು ಕೈಮೆಂಟ್ ಸಿಕ್ವೆರಾ, ಬೆಂಗಳೂರು, ಶ್ರೀನಿಧಿ ಆಚಾರ್ಯ, ಉಡುಪಿ.

ಟೂರ್ನಮೆಂಟ್ ಸಂಯೋಜಕರಾಗಿ ರವಿಶಂಕರ್ ನಾಯಕ್, ಪರ್ಕಳ, ಪ್ರಶಾಂತ್ ಕೋಟ್ಯಾನ್, ಮಲ್ಪೆ, ತಾಂತ್ರಿಕ ಸಮಿತಿಯ ಸಂಯೋಜಕರಾಗಿ ಶಿವಪ್ರಸಾದ್ ಆಚಾರ್ಯ, ಬಂಟಕಲ್. ಶ್ರೀರಾಜ್.ಪಿ.ಬಿ, ಎರ್ನಾಕುಲಂ, ಮಹಿಳಾ ವಿಭಾಗದ ಸಂಯೋಜಕರಾಗಿ ಪ್ರವೀಣ ಸುವರ್ಣ, ಪರ್ಕಳ, ಪ್ರತಿಕ್ಷ ಆಚಾರ್ಯ, ಪಣಿಯೂರು.

ಆಡಳಿತ ಮಂಡಳಿಯ ಸದಸ್ಯರಾಗಿ ಕಿರಣ್ ಮಾರ್ಷಲ್, ಜಗನ್ನಾಥ್ ಅಮೀನ್, ಪ್ರಶಾಂತ್ ಆಚಾರ್ಯ, ಉಮೇಶ್ ಆಚಾರ್ಯ, ನವೀನ್ ಕುಮಾರ್, ಸತೀಶ್ ಕಿಣಿ, ಪ್ಲೇಟೆಸ್ ಸಿಕ್ವೆರಾ, ಜಯರಾಮ್ ಆಚಾರ್ಯ, ಪದ್ಮನಾಭ ಅಮಿನ್.

ಕರಾಟೆ ಗುರಿಗಳು ಮತ್ತು ಪ್ರಯೋಜನಗಳು

ಆಯುಧಗಳು ಇಲ್ಲದೆ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಪ್ರಾಮುಖ್ಯತೆ ನೀಡಿ ಅಭ್ಯಾಸ ಮಾಡುವ ಜಗತ್ತಿನಲ್ಲಿ ಅತ್ಯಂತ ಪ್ರಸಿದ್ದಿ ಪಡೆದ ಸ್ವಯಂ ರಕ್ಷಣಾ ಕಲೆಯಾದ ಕರಾಟೆಯು ಮಕ್ಕಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿ ಸ್ವಯಂ ರಕ್ಷಣೆಗೆ ಸಹಕಾರಿಯಾಗುತ್ತದೆ. ಹೊಸ ಸಮಿತಿಯಿಂದ ಮುಂದೆ ಕರಾಟೆ ಪರೀಕ್ಷೆಗಳು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಗಳು ಮತ್ತು ವಿವಿಧ ಕಡೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿಯನ್ನು ಹೊಂದಿರುತ್ತದೆ.