![]() |
| ಪ್ರಕಾಶ್ ರೈ |
ಉಡುಪಿ: ಬುಧವಾರ ಸಂಜೆ 6 ಗಂಟೆಗೆ ಕೆಮ್ತೂರು ತುಳು ನಾಟಕ ಪರ್ಬದ ಕಾರ್ಯಕ್ರಮಕ್ಕೆ ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕರಾದ ಪ್ರಕಾಶ್ ರೈ ಬರಲಿದ್ದಾರೆ ಎಂದು ತುಳುಕೂಟದ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ತುಳುಕೂಟ ಉಡುಪಿ ವತಿಯಿಂದ 24ನೇ ವರ್ಷದ ಕಸ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆಯು ಜನವರಿ 5ರಿಂದ 11ರವರೆಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ.
