![]() |
| ಗೀತಾಂಜಲಿ ಸುವರ್ಣಗೆ ಗೌರವ |
ಬಹರೈನ್ ಬಿಲ್ಲವಾಸ್ ನಿಂದ ಗುರುವಂದನಾ ಕಾರ್ಯಕ್ರಮ ಆಯೋಜನೆಗೊಂಡಿತ್ತು.ಬಹರೈನ್ ಕನ್ನಡ ಸಂಘದಲ್ಲಿ ಕನ್ಯಾಢಿ ರಾಮ ಕ್ಷೇತ್ರದ ಪೀಠಾಧಿಪತಿಗಳು ಜಗದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಯವರನ್ನು ಬಹರೈನ್ ಹಾಗೂ ಕೊಲ್ಲಿ ರಾಷ್ಟ್ರಗಳ ಬಂಧುಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖಂಡರಾದ ಗೀತಾಂಜಲಿ ಸುವರ್ಣ ಭಾಗಿಯಾದರು.ಇದೇ ಸಂದರ್ಭ ಗೀತಾಂಜಲಿ ಸುವರ್ಣ ಅವರನ್ನು ಗೌರವಿಸಲಾಯಿತು. ಇದು ನನ್ನ ಭಾಗ್ಯ. ನನ್ನನ್ನು ಗುರುತಿಸಿ ಗೌರವಿಸಿದ ನನ್ನ ಎಲ್ಲ ಬಂಧುಗಳಿಗೆ ನಾನು ಶಿರ ಬಾಗಿ ನಮಿಸುತ್ತೇನೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಗುರುಗಳ ಆಶೀರ್ವಚನ ಅದ್ಬುತವಾದ ಸಂದೇಶ ನೀಡಿತು. ಈ ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದ ಬಾಂಧವರು ಸ್ವಾಮೀಜಿ ಯವರ ಆಶೀರ್ವಾದ ಪಡೆದರು. ನನ್ನ ಸಹೋದರ ಹರೀಶ್ ಪೂಜಾರಿ ಹಾಗೂ ಅವರ ತಂಡಕ್ಕೆ ಮನದಾಳದ ಧನ್ಯವಾದಗಳು. ದೇವರು ಒಳ್ಳೆಯದು ಮಾಡಲಿ. ನಾನು ನಂಬುವ ಎಲ್ಲಾ ದೈವ ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಗೀತಾಂಜಲಿ ಸುವರ್ಣ ಹೇಳಿದ್ದಾರೆ.


