ಉಡುಪಿ: ಆರೆಸ್ಸೆಸ್ ಚಟುವಟಿಕೆ ನಿಷೇಧ ಪ್ರಸ್ತಾಪ- ಸಿಎಂ ಎಲ್ಲ ಅಂಶಗಳನ್ನು ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು- ಪೇಜಾವರ ಶ್ರೀ

 

ಪೇಜಾವರ ಶ್ರೀ


ಉಡುಪಿ: ಆರ್ ಎಸ್ ಎಸ್ ನಿಷೇಧ ವಿಚಾರವಾಗಿ ಈಗ ನಡೆಯುತ್ತಿರುವ ಚರ್ಚೆಗೆ ಉಡುಪಿಯ ಪೇಜಾವರ ಮಠದ  ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು ,ಮಾನ್ಯ ಖರ್ಗೆಯವರು , ಅವರ ಅಭಿಪ್ರಾಯವನ್ನು ಸರಕಾರಕ್ಕೆ ಹೇಳಿದ್ದಾರೆ.ಅವರ ಅಭಿಪ್ರಾಯ ತಿಳಿಸುವ ಹಕ್ಕು ಅವರಿಗೆ ಖಂಡಿತವಾಗಿ ಇದೆ.ಮುಖ್ಯಮಂತ್ರಿಗಳು ಎಲ್ಲರ ಜೊತೆ ವಿಮರ್ಶಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ.ಆರ್ ಎಸ್ ಎಸ್ ತನ್ನ ಹೆಸರಿನಂತೆ ರಾಷ್ಟ್ರೀಯ ಸೇವೆಯನ್ನು ಮಾಡುತ್ತಿದೆ.ವ್ಯವಸ್ಥೆಯಲ್ಲಿ ಕೆಲವು ತಪ್ಪುಗಳಾಗುವುದು ಸಹಜ.ತಪ್ಪುಗಳು ಇದೆಯೋ ಇಲ್ಲವೋ ವಿಮರ್ಶಿಸಬೇಕು ಎಂದು ಹೇಳಿದ್ದಾರೆ.

ಒಬ್ಬರಿಗೆ ಸರಿ ಎಂದು ಕಂಡದ್ದು ಮತ್ತೊಬ್ಬರಿಗೆ ತಪ್ಪು ಎಂದೆನಿಸಬಹುದು, ತಪ್ಪುಗಳಿದ್ದರೆ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ.ಆರ್ ಎಸ್ ಎಸ್ ನೂರು ವರ್ಷಗಳಿಂದ ಮಾಡುತ್ತಿರುವ ದೇಶ ಕಾರ್ಯವನ್ನು ಗಮನಿಸಬೇಕು.ದೇಶಕ್ಕೆ ಆಗಿರುವ ಲಾಭವನ್ನು ಗಮನಿಸಬೇಕು.ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಆರ್ ಎಸ್ ಎಸ್ ಮಾಡಿರುವ ದೇಶ ಸೇವೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.ಮುಂದೆಯೂ ಆರ್ ಎಸ್ ಎಸ್ ಸೇವ ಕಾರ್ಯ ಮುಂದುವರಿಯುತ್ತದೆ.ಮುಖ್ಯಮಂತ್ರಿಗಳು ಎಲ್ಲರ ಜೊತೆ ಚರ್ಚಿಸಿ ಯೋಗ್ಯವಾದ ನಿರ್ಧಾರ ಕೈಗೊಳ್ಳಲಿ.ಪ್ರಿಯಾಂಕ ಖರ್ಗೆಯವರು ತಮ್ಮ ಅಭಿಪ್ರಾಯವನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.  ಮುಖ್ಯಮಂತ್ರಿಗಳು ಯೋಗ್ಯ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ.ನೂರು ವರ್ಷ ಪೂರೈಸಿರುವ ಆರ್ ಎಸ್ ಎಸ್ ಬ್ಯಾನ್ ಮಾಡುವುದು ಸರಿಯಲ್ಲ.ಸರಕಾರ ಎಲ್ಲ ವಿಷಯದಲ್ಲೂ ಲಾಭ ನಷ್ಟವನ್ನು ಗಮನಿಸಬೇಕು.ಮೂಗು ಸೋರುತ್ತಿದೆ ಎಂದು ಅದನ್ನು ಕಿತ್ತೆಸೆಯುತ್ತಾರಾ? ಎಲ್ಲವೂ ಸುಖಾಂತವಾಗುತ್ತದೆ ಎಂದು ಹೇಳಿದ್ದಾರೆ.